ಕರ್ನಾಟಕ

karnataka

ETV Bharat / state

ಅಬ್ಬಾ ಒಂದಲ್ಲ ಎರಡಲ್ಲ 556 ಮಂದಿ ಬಂಧನ... ಇದು ಸಿಸಿಬಿ ಪೊಲೀಸ್​ ಕಾರ್ಯಾಚರಣೆ! - ಬೆಂಗಳೂರಿನಲ್ಲಿ ನಡೆಯುವ ಕ್ರಿಕೆಟ್ ಬೆಟ್ಟಿಂಗ್,ಗ್ಯಾಂಬ್ಲಿಂಗ್

ಬೆಂಗಳೂರಿನಲ್ಲಿ ನಡೆಯುವ ಕ್ರಿಕೆಟ್ ಬೆಟ್ಟಿಂಗ್, ಗ್ಯಾಂಬ್ಲಿಂಗ್ ನಂತಹ ಅಕ್ರಮ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 556 ಜನರನ್ನ ಬಂಧಿಸಿದ್ದಾರೆ.

ಸಿಸಿಬಿ

By

Published : Oct 18, 2019, 5:32 PM IST

ಬೆಂಗಳೂರು:ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸಿಸಿಬಿ ಡಿಸಿಪಿ ರವಿ ಹಾಗೂ ಕುಲ್ ದೀಪ್ ಜೈನ್​ರ ತಂಡ, ಸುಮಾರು 81 ಕಡೆ ದಾಳಿ ನಡೆಸಿ 556 ಜನರನ್ನ ಬಂಧಿಸಿದ್ದಾರೆ. ಅಲ್ಲದೆ, 2 ಕೋಟಿ 15 ಲಕ್ಷ ಬೆಲೆ ಬಾಳುವ ಆಸ್ತಿಗಳನ್ನ ಸೀಜ್ ಮಾಡಿದ್ದಾರೆ.

ಈ ಬಾರಿಯ ದಾಳಿಯಲ್ಲಿ ಅತಿ ಹೆಚ್ಚು ಕ್ರಿಕೆಟ್ ಬೆಟ್ಟಿಂಗ್,ಗ್ಯಾಂಬ್ಲಿಂಗ್,ಲೈವ್ ಬ್ಯಾಂಡ್ , ಡ್ರಗ್ಸ್, ವೇಶ್ಯಾವಾಟಿಕೆ, ಮೆಡಿಕಲ್ ಚೀಟಿಂಗ್, ಪಬ್​ಗಳಲ್ಲಿ ಹಾಗೂ ಹೋಟೆಲ್​ಗಳಲ್ಲಿ ಸಮಯ ಮೀರಿ ಶಬ್ಧ ಮಾಲಿನ್ಯ ಹೀಗೆ ನಾನಾ ಅಕ್ರಮ ಚಟುವಟಿಕೆ ಹೊಂದಿರುವ ಕಡೆಗಳಲ್ಲಿ ದಾಳಿ ಮಾಡಿ ಇವುಗಳಿಗೆ ಬ್ರೇಕ್ ಹಾಕಿದ್ದಾರೆ.

ಸಿಸಿಬಿ ಪೊಲೀಸರಿಂದ ಅಕ್ರಮ ಅಡ್ಡೆಗಳ ಮೇಲೆ ದಾಳಿ

ಇನ್ನು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ರೌಡಿ ಚಟುವಟಿಕೆ, ಅಪರಾಧ ತಡೆಗಳು, ಕಾನೂನುಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕಲು ಈ ರೀತಿ ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details