ಕರ್ನಾಟಕ

karnataka

ETV Bharat / state

ಅಕ್ರಮ ಚಟುವಟಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಬೆಂಗಳೂರಲ್ಲಿ ಬಾರ್ ಮೇಲೆ‌ ಸಿಸಿಬಿ ದಾಳಿ‌ - DCP Ravi

ಅಕ್ರಮ ಅವ್ಯಹಾರ ಹತೋಟಿಗೆ ಪಣ ತೊಟ್ಟಿರುವ ಸಿಸಿಬಿ ಪೊಲೀಸರು ಮತ್ತೆ ಬಾರ್ ಮತ್ತು ಪಬ್ ದಾಳಿಯನ್ನು ಮುಂದುವರೆಸಿದ್ದಾರೆ. ಮೆಜೆಸ್ಟಿಕ್ ನಲ್ಲಿರುವ ಬಾರ್ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ.

ಬ್ಲ್ಯೂ ಹೆವೆನ್ ಬಾರ್ ಮೇಲೆ‌ ಸಿಸಿಬಿ ದಾಳಿ‌

By

Published : Aug 16, 2019, 8:44 AM IST

ಬೆಂಗಳೂರು: ನಗರದಲ್ಲಿ ಮತ್ತೆ ಸಿಸಿಬಿ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ಮೆಜಿಸ್ಟಿಕ್​ನಲ್ಲಿರುವ ಬಾರ್​ವೊಂದರ ಮೇಲೆ ದಾಳಿ ಮಾಡಿದ್ದಾರೆ.

ನಿನ್ನೆ ಬಾರ್​ನಲ್ಲಿ ಮೊಜು ಮಸ್ತಿ ಮೂಡಿನಲ್ಲಿದ್ದ ಯುವಕ- ಯುವತಿಯರಿಗೆ ಶಾಕ್​ ಕಾದಿತ್ತು. ನಗರದ ಮೆಜೆಸ್ಟಿಕ್​ನಲ್ಲಿರುವ ಬಾರ್​ ಮೇಲೆ‌ ಸಿಸಿಬಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಮೇರೆಗೆ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿ ನೆತೃತ್ವದ ತಂಡ ರಾತ್ರಿ ದಾಳಿ ನಡೆಸಿ, ಬಾರ್​ನಲ್ಲಿದ್ದ 68 ಯುವತಿಯರನ್ನು ರಕ್ಷಿಸಿ, 14 ಗ್ರಾಹಕರು ಹಾಗೂ 20 ಜನ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಸುಮಾರು 65,770 ನಗದು ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

ABOUT THE AUTHOR

...view details