ಕರ್ನಾಟಕ

karnataka

ETV Bharat / state

ರಾಗಿಣಿ, ಸಂಜನಾ ಹೇರ್ ಫಾಲಿಕಲ್‌ ಟೆಸ್ಟ್ ಮಾಡಲು ಮುಂದಾದ ಸಿಸಿಬಿ - bangalore drugs case

ಡ್ರಗ್ಸ್​​ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಗಲ್ರಾನಿ ಹೇರ್​ ಫಾಲಿಕಲ್‌ ಟೆಸ್ಟ್ ಮಾಡಲು ಸಿಸಿಬಿ ತನಿಖಾಧಿಕಾರಿಗಳು ಮುಂದಾಗಿದ್ದಾರೆ.

ನಟಿಯರಾದ ರಾಗಿಣಿ ಮತ್ತು ಸಂಜನಾ ಗಲ್ರಾನಿ
ನಟಿಯರಾದ ರಾಗಿಣಿ ಮತ್ತು ಸಂಜನಾ ಗಲ್ರಾನಿ

By

Published : Sep 10, 2020, 10:44 PM IST

ಬೆಂಗಳೂರು:ಸ್ಯಾಂಡಲ್​​ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಹಾಗೂ‌ ಸ‌ಂಜನಾ ಗಲ್ರಾನಿ ಹೇರ್ ಫಾಲಿಕಲ್ ಟೆಸ್ಟ್ ಮಾಡಿಸಲು ಸಿಸಿಬಿ ತನಿಖಾಧಿಕಾರಿಗಳು ಮುಂದಾಗಿದ್ದಾರೆ.

ಬೆಂಗಳೂರಿನ ಎಫ್​​ಎಸ್​ಎಲ್​​ನಲ್ಲಿ ಹೇರ್ ಫಾಲಿಕಲ್ ಟೆಸ್ಟ್ ಮಾಡಿಸುವ ಸೌಲಭ್ಯ ಇದೆ ಎಂದು‌ ಹೇಳಲಾಗಿದ್ದು, ಹೈದರಾಬಾದ್​ನ ಎಫ್​ಎಸ್​​ಎಲ್​ ತಜ್ಞರೊಂದಿಗೆ ಮಾತನಾಡಿ ಟೆಸ್ಟ್ ಮಾಡಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಎರಡು ದಿನಗಳ ಹಿಂದೆ ಡ್ರಗ್ಸ್ ತೆಗೆದುಕೊಂಡಿದ್ದಾರೋ ಅಥವಾ ಸಾಮಾನ್ಯವಾಗಿ ಡ್ರಗ್ಸ್ ತೆಗೆದುಕೊಂಡಿದ್ದಾರೋ ‌ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಮೂತ್ರ ಪರೀಕ್ಷೆ ಮೂಲಕ‌‌ ಕಂಡು ಕೊಳ್ಳಬಹುದಾಗಿದೆ. ಅದೇ ರೀತಿ ಡ್ರಗ್ಸ್ ತೆಗೆದುಕೊಂಡರೂ 90 ದಿನಗೊಳಗಾಗಿ ಡ್ರಗ್ಸ್ ಕೊಂಡಿರುವ ಬಗ್ಗೆ ಪತ್ತೆ ಹಚ್ಚಬಹುದಾಗಿದೆ‌.

ಆಸ್ಪತ್ರೆ ಹಾಗೂ ಲ್ಯಾಬ್​​ಗಳಲ್ಲಿ ಹೇರ್ ಫಾಲಿಕಲ್ ಟೆಸ್ಟ್ ಮಾಡಿಸುತ್ತಾರೆ. ಟೆಸ್ಟ್​​ಗಾಗಿ ವೈದ್ಯರು 100 ರಿಂದ 120 ಕೂದಲು ತೆಗೆಯುತ್ತಾರೆ. ಕೂದಲು ತೆಗೆದುಕೊಂಡು ಲ್ಯಾಬ್​ಗೆ ಒಯ್ಯುತ್ತಾರೆ. ಇದಕ್ಕೆ ಹೈದರಾಬಾದ್ ಟೀಂ ಒಪ್ಪಿಕೊಂಡಿದ್ದು, ಸ್ಯಾಂಪಲ್ ಕಲೆಕ್ಟ್ ಮಾಡಲು ಅಲ್ಲಿನ ಟೆಕ್ನಿಶಿಯನ್​​ಗಳೇ ಬಂದು ಸ್ಯಾಂಪಲ್ ಸಂಗ್ರಹಿಸಲಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details