ಬೆಂಗಳೂರು : ಕೊರೊನಾ ರೋಗಿಗಳಿಗಾಗಿ ಬಿಬಿಎಂಪಿ ಹಾಸಿಗೆ ಮೀಸಲಿಡಲು ಮಾಡಿಕೊಂಡಿರುವ ಸಾಫ್ಟ್ವೇರ್ ಮುಖಾಂತರ ಅವ್ಯವಹಾರ ನಡೆಸಲಾಗುತ್ತಿದೆ ಎಂಬ ಶಂಕೆ ಮೇರೆಗೆ ನಗರದ ಎಲ್ಲಾ ವಲಯಗಳ ಕೊರೊನಾ ವಾರ್ ರೂಂಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಬಿಬಿಎಂಪಿ ಕೊರೊನಾ ವಾರ್ ರೂಂಗಳ ಮೇಲೆ ಸಿಸಿಬಿ ಪೊಲೀಸರ ದಾಳಿ - ಮೀಷನರ್ ಕಮಲ್ ಪಂತ್
ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ಬೆಡ್ ಬ್ಲಾಕ್ ದಂಧೆ ಬಯಲು ಮಾಡಿದ ಬೆನ್ನಲ್ಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಮೊದಲು ಬೆಡ್ ಬ್ಲಾಕ್ ಪ್ರಕರಣದಲ್ಲಿ 17 ಮಂದಿ ಗುತ್ತಿಗೆ ನೌಕರರನ್ನು ಅಮಾನತು ಮಾಡಲಾಗಿತ್ತು..
ಬಿಬಿಎಂಪಿಯ ಕೊರೊನಾ ವಾರ್ ರೂಂಗಳ ಮೇಲೆ ಸಿಸಿಬಿ ದಾಳಿ
ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ಬೆಡ್ ಬ್ಲಾಕ್ ದಂಧೆ ಬಯಲು ಮಾಡಿದ ಬೆನ್ನಲ್ಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಮೊದಲು ಬೆಡ್ ಬ್ಲಾಕ್ ಪ್ರಕರಣದಲ್ಲಿ 17 ಮಂದಿ ಗುತ್ತಿಗೆ ನೌಕರರನ್ನು ಅಮಾನತು ಮಾಡಲಾಗಿತ್ತು.
ಅಲ್ಲದೆ ಸಂಸದರು ಕಮಿಷನರ್ ಕಮಲ್ ಪಂತ್ ಅವರನ್ನು ಭೇಟಿ ಮಾಡಿ ಕೆಲ ದಾಖಲೆಗಳನ್ನ ನೀಡಿದ್ದರು. ಇದರ ಬೆನ್ನಲ್ಲೇ ಸಿಸಿಬಿ ದಾಳಿ ನಡೆಸಿದೆ.