ಬೆಂಗಳೂರು/ರಾಮನಗರ:ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ದಿ. ಮುತ್ತಪ್ಪ ರೈ ಮಗನ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಮುತ್ತಪ್ಪ ರೈ ಪುತ್ರನ ಮನೆ ಮೇಲೆ ಸಿಸಿಬಿ ದಾಳಿ - CCB raids on Muthappa Rai's son's house
ಮುತ್ತಪ್ಪ ರೈ ಮಗ ರಿಕ್ಕಿ ರೈ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮುತ್ತಪ್ಪ ರೈ ಮಗನ ಮನೆ ಮೇಲೆ ಸಿಸಿಬಿ ದಾಳಿ
ಸದಾಶಿವನಗರ ಹಾಗೂ ಹೊರವಲಯದ ಬಿಡದಿ ಬಳಿ ಇರುವ ರಿಕ್ಕಿ ರೈ ಮನೆ ಮೇಲೆ ಸಿಸಿಬಿ ಎಸಿಪಿ ವೇಣು ಗೋಪಾಲ್ ನೇತೃತ್ವದಲ್ಲಿ 25 ಮಂದಿಯ ತಂಡ ಸರ್ಚ್ ವಾರೆಂಟ್ ಪಡೆದು ದಾಳಿ ಮಾಡಿದೆ. ಸದ್ಯ ಶೋಧ ಮುಂದುವರೆದಿದ್ದು, ಈಗಾಗಲೇ ಡ್ರಗ್ಸ್ ಮಾಫಿಯಾ ಸಂಬಂಧ ಸಿಸಿಬಿ ಅಧಿಕಾರಿಗಳು ಹಲವು ಮಂದಿಯನ್ನ ವಿಚಾರಣೆಗೆ ಒಳಪಡಿಸಿದ್ದಾರೆ.
ಡ್ರಗ್ಸ್ ಪೂರೈಕೆ ಹಾಗೂ ಪಾರ್ಟಿಯಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹಾಗೆಯೇ ಬಂಧಿತ ಪೆಡ್ಲರ್ಗಳ ಮೊಬೈಲ್ ರಿಟ್ರೈವ್ ಮಾಡಿದಾಗ ಮುತ್ತಪ್ಪ ರೈ ಮಗನ ಕೆಲ ಕಾಲ್ ಲಿಸ್ಟ್ ಹಾಗೂ ಮೆಸೇಜ್ ಬಯಲಾಗಿತ್ತು ಎನ್ನಲಾಗಿದೆ.
Last Updated : Oct 6, 2020, 10:20 AM IST