ಕರ್ನಾಟಕ

karnataka

ETV Bharat / state

ವಿವೇಕ್‌ ಒಬೆರಾಯ್‌ ಮುಂಬೈ ನಿವಾಸದ ಮೇಲೆ ಸಿಸಿಬಿ ದಾಳಿ: ಪೊಲೀಸರ ಕೈಗೆ ಸಿಗದ ಆದಿತ್ಯ ಆಳ್ವ - CCB attack on house of Bollywood actor Vivek Oberoi

ಸ್ಯಾಂಡಲ್‌ ವುಡ್ ಡ್ರಗ್ಸ್ ಲಿಂಕ್ ಆರೋಪ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್​​ ಸಿಕ್ಕಿದ್ದು, ಪಂಚಭಾಷಾ ನಟ ವಿವೇಕ್ ಒಬೆರಾಯ್ ಅವರ ಮುಂಬೈಯಲ್ಲಿರುವ ನಿವಾಸದ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಆದ್ರೆ, ಈ ವೇಳೆ ಆದಿತ್ಯ ಆಳ್ವ ಪೊಲೀಸರಿಗೆ ಸಿಕ್ಕಿಲ್ಲ ಎಂಬ ಮಾಹಿತಿ ದೊರೆತಿದೆ.

actor Vivek Oberoi
ಬಾಲಿವುಡ್ ನಟ ವಿವೇಕ್ ಓಬೆರಾಯ್ ಮನೆ ಮೇಲೆ ಸಿಸಿಬಿ ದಾಳಿ

By

Published : Oct 15, 2020, 2:28 PM IST

Updated : Oct 15, 2020, 3:06 PM IST

ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಬಾಲಿವುಡ್ ಹಾಗೂ ಪಂಚಭಾಷಾ ನಟ ವಿವೇಕ್ ಒಬೆರಾಯ್ ಅವರ ಮುಂಬೈಯಲ್ಲಿರುವ ಮನೆಯ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಅಲ್ಲಿಯೂ ಆದಿತ್ಯ ಆಳ್ವ ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಯಾಂಡಲ್‌ವುಡ್ ಡ್ರಗ್ಸ್ ಆರೋಪ ಪ್ರಕರಣದಲ್ಲಿ ಎ-6 ಆರೋಪಿಯಾಗಿರುವ ಆದಿತ್ಯ ಆಳ್ವಾ ಭಾವ ವಿವೇಕ್ ಒಬೆರಾಯ್ ಆಗಿದ್ದಾರೆ. ಸದ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆದಿತ್ಯಾ ಆಳ್ವಾಗಾಗಿ ಶೋಧ ಕಾರ್ಯ ಮುಂದುವರೆದಿದೆ. ‌ಕಾಟನ್‌ಪೇಟೆಯಲ್ಲಿ ದಾಖಲಾಗಿರುವ ಎಫ್​​ಐಆರ್​ನಲ್ಲಿ ಆರೋಪಿಯಾಗಿರೋ ಆಳ್ವಾ ಸದ್ಯ ಸಿಸಿಬಿ ತನಿಖೆಗೆ ಬಹಳ ಅಗತ್ಯವಾಗಿದ್ದಾರೆ.

ಆದಿತ್ಯ ಆಳ್ವಾ, ವಿವೇಕ್ ಒಬೆರಾಯ್ ಮನೆಯಲ್ಲಿರೋದ್ರ ಬಗ್ಗೆ ಸಿಸಿಬಿ ಪೊಲೀಸರಿಗೆ ಶಂಕೆ ಇದ್ದು, ಈ ಹಿನ್ನೆಲೆ ಕೋರ್ಟ್‌ನಿಂದ ಸರ್ಚ್ ವಾರೆಂಟ್ ಪಡೆದು ವಿವೇಕ್ ಒಬೆರಾಯ್ ಮನೆ ಮೇಲೆ ಸಿಸಿಬಿ ಪೊಲೀಸರು ಶೋಧ ನಡೆಸಿದ್ದಾರೆ.

Last Updated : Oct 15, 2020, 3:06 PM IST

ABOUT THE AUTHOR

...view details