ಕರ್ನಾಟಕ

karnataka

ETV Bharat / state

ಲೈಸೈನ್ಸ್ ಪಡೆಯದ ಬಾರ್ ಆ್ಯಂಡ್​ ರೆಸ್ಟೋರೆಂಟ್ ಮೇಲೆ ಸಿಸಿಬಿ ದಾಳಿ: ಇಬ್ಬರ ಬಂಧನ - By chance bar and restaurant seas

ಪರವಾನಿಗೆ ಪಡೆಯದೇ ಡಿಸ್ಕೋ ಥೆಕ್ ಮಾದರಿಯಲ್ಲಿ ಡಿಜೆ ಮೂಲಕ ಗ್ರಾಹಕರಿಗೆ ನೃತ್ಯ ಮಾಡಲು ಪ್ರೇರೇಪಿಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಬೈ-ಚಾನ್ಸ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ಧಾರೆ.

ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ದಾಳಿ

By

Published : Aug 26, 2019, 9:37 AM IST

ಬೆಂಗಳೂರು:ಪರವಾನಗಿ ಪಡೆಯದೇ ಡಿಸ್ಕೋ ಥೆಕ್ ಮಾದರಿಯಲ್ಲಿ ಡಿಜೆ ಮೂಲಕ ಗ್ರಾಹಕರಿಗೆ ನೃತ್ಯ ಮಾಡಲು ಪ್ರೇರೇಪಿಸುತ್ತಿದ್ದ ಆರೋಪದಡಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ರಾಜರಾಜೇಶ್ವರಿ ನಗರದ ಕೆ.ಆರ್. ರಾಜಣ್ಣ ಹಾಗೂ ಲಿಂಗರಾಜಪುರದ ಜೇಮ್ಸ್ ಜಾನ್ ಬಂಧಿತ ಆರೋಪಿಗಳು. ಬ್ರಿಗೇಡ್ ರಸ್ತೆ ಶಾಂತಲಾ ನಗರದ ಬೈ-ಚಾನ್ಸ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಡಿಸ್ಕೋ ಥೆಕ್ ಮಾದರಿಯಲ್ಲಿ ಡಿಜೆ ಮೂಲಕ ಗ್ರಾಹಕರಿಗೆ ನೃತ್ಯ ಮಾಡಲು ಪ್ರೇರೇಪಿಸಲಾಗುತ್ತಿದೆ ಎಂಬ ಆರೋಪ ಕುರಿತು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಶನಿವಾರ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಮ್ಯೂಸಿಕ್ ಪ್ಲೇ ಮಾಡಲು ಬಳಸುವ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಅಶೋಕ್​ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details