ಕರ್ನಾಟಕ

karnataka

ETV Bharat / state

ಪ್ರತಿಷ್ಠಿತ ಮೊಬೈಲ್ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಬಿಡಿ ಭಾಗ ಮಾರಾಟ.. ಗ್ರಾಹಕರೇ ಜಾಗೃತ - ಪ್ರತಿಷ್ಠಿತ ಮೊಬೈಲ್ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಬಿಡಿ ಭಾಗ ಮಾರಾಟ ಮಾಡುತ್ತಿದ್ದವರ ಮೇಲೆ ಸಿಸಿಬಿ ದಾಳಿ

ಬೆಂಗಳೂರಲ್ಲಿ ಪ್ರತಿಷ್ಠಿತ ಬ್ರ್ಯಾಂಡ್​ ಹೆಸರಲ್ಲಿ ನಕಲಿ ಮೊಬೈಲ್​ ಬಿಡಿಭಾಗ ಮಾರಾಟ- ಪೊಲೀಸರ ಕಾರ್ಯಾಚರಣೆ- ಖದೀಮರು ಬಲೆಗೆ

Sale of fake electronic accessories of reputed companies including Apple One Plus
Sale of fake electronic accessories of reputed companies including Apple One Plus

By

Published : Jul 20, 2022, 4:01 PM IST

ಬೆಂಗಳೂರು: ಆ್ಯಪಲ್, ಒನ್ ಪ್ಲಸ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ನಕಲಿ ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನ ಅಸಲಿಯೆಂದು ಮಾರಾಟ ಮಾಡುತ್ತ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿ ಖದೀಮರ ಜಾಲದ ಬಣ್ಣ ಕೊನೆಗೂ ಬಯಲಾಗಿದೆ. ಗ್ರಾಹಕರನ್ನು ವಂಚಿಸುತ್ತಿದ್ದ ಐದು ಅಂಗಡಿಗಳ ಮೇಲೆ ಇಂದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಎಸ್.ಜೆ ಪಾರ್ಕ್ ಹಾಗೂ ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಐದು ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದ್ದು, ಪ್ರತಿಷ್ಠಿತ ಬ್ರ್ಯಾಂಡ್‌ನ ಹೆಸರಿನಲ್ಲಿ ನಕಲಿ ವಸ್ತುಗಳನ್ನ ಮಾರಾಟ ಮಾಡುತ್ತ ಗ್ರಾಹಕರಿಗೆ ಮಂಕುಬೂದಿ ಎರಚುತ್ತಿರುವುದು ಬೆಳಕಿಗೆ ಬಂದಿದೆ.

ಪ್ರತಿಷ್ಠಿತ ಮೊಬೈಲ್ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಬಿಡಿ ಭಾಗ ಮಾರಾಟ

ದಾಳಿ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ಬಿಡಿಭಾಗಗಳನ್ನ ವಶಕ್ಕೆ ಪಡೆಯಲಾಗಿದ್ದು, ಅಂಗಡಿಯ ಸಿಬ್ಬಂದಿಯನ್ನ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರತಿಷ್ಠಿತ ಮೊಬೈಲ್ ಬ್ರ್ಯಾಂಡ್ ಹೆಸರಿನಲ್ಲಿ ನಕಲಿ ಬಿಡಿ ಭಾಗ ಮಾರಾಟ

ಇದನ್ನೂ ಓದಿ: ಹೆಚ್​ಡಿಕೆ, ಹೆಚ್​ಡಿಡಿ ಅವರಿಗೆ ಅವಕಾಶ ನೀಡಿದ್ದೀರಿ, ನನಗೂ ನೀಡಿ: ಸಮುದಾಯಕ್ಕೆ ಡಿಕೆಶಿ ಮನವಿ

For All Latest Updates

TAGGED:

ABOUT THE AUTHOR

...view details