ಕರ್ನಾಟಕ

karnataka

ETV Bharat / state

ಬೆಂಗಳೂರಿನ ಪಬ್​​ಗಳ​ ಮೇಲೆ ಸಿಸಿಬಿ ದಾಳಿ: 20 ಮಂದಿ ವಶಕ್ಕೆ - ಸಿಸಿಬಿ ಪೊಲೀಸರು

ಬೆಂಗಳೂರು ನಗರದಲ್ಲಿ ಪಬ್​ಗಳ ಮೇಲೆ ಸಿಸಿಬಿ ದಾಳಿ ನಡೆಸಿದೆ. ಜೂಜಾಟದಲ್ಲಿ ತೊಡಗಿದ್ದ 20 ಮಂದಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಸಿಸಿಬಿ ದಾಳಿ

By

Published : Sep 15, 2019, 10:52 AM IST

ಬೆಂಗಳೂರು:ನಗರದ ಪಬ್​ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 20 ಮಂದಿ ಜೂಜುಕೋರರನ್ನು ಬಂಧಿಸಿದ್ದಾರೆ.

ಕೆ.ಆರ್.ಪುರಂ ಬಳಿ ಇರುವ ಓಂ ಶ್ರೀ ರಿಕ್ರೀಯೇಷನ್ ಪಬ್​ನಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿತ್ತು. ಅದರಂತೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್​ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆದಿದೆ.

ದಾಳಿಯಲ್ಲಿ ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ 20 ಮಂದಿ ಜೂಜಾಟದಲ್ಲಿ ಭಾಗಿಯಾಗಿದ್ರು. ಇನ್ನು ‌ಕ್ಲಬ್ ಓನರ್ ಲೋಕೇಶ್ ಸೇರಿದಂತೆ ಒಟ್ಟು 22 ಜನರನ್ನ ಹಾಗೂ 2 ಲಕ್ಷ ರೂ. ಹಣ ವಶಕ್ಕೆ ಪಡೆದ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ

ABOUT THE AUTHOR

...view details