ಕರ್ನಾಟಕ

karnataka

ETV Bharat / state

ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮತ್ತೆ ಅಕ್ರಮ ವಸ್ತುಗಳು ಪತ್ತೆ: ಸಿಸಿಬಿ ದಾಳಿ ವೇಳೆ ಸಿಕ್ಕಿದ್ದೇನು?

ಕಾನೂನು ಸುವ್ಯವಸ್ಥೆ ಕಾಪಾಡಲು, ರೌಡಿ ಚಟುವಟಿಕೆಗಳಿಗೆ ಬ್ರೇಕ್ ಹಾಕಲು, ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದರು. ಹಿಗಾಗಿ ಕಾರಾಗೃಹದ ಮೇಲೆ ಸಿಸಿಬಿ ತಂಡ ದಾಳಿ ಮಾಡಿ ಪ್ರತಿ ಬ್ಯಾರಕ್ ನಲ್ಲೂ ತಪಾಸಣೆ ನಡಸಿ 37 ಚಾಕು, ಡ್ರ್ಯಾಗರ್, ಗಾಂಜಾ ಮತ್ತು ಗಾಂಜಾ ಸೇವನೆ ಮಾಡುವ ಪೈಪ್, ಮೊಬೈಲ್ ಹಾಗೂ ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದೆ.

ಪರಪ್ಪನ ಅಗ್ರಹಾರ ಜೈಲು

By

Published : Oct 18, 2019, 8:04 PM IST

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಲ್ಲಾ ‌ರೀತಿಯ ಅವ್ಯಹಾರ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪ ಮಾಡಿದ್ದ ಜೈಲಿನ ಮಾಜಿ ಅಧಿಕಾರಿ ಡಿ. ರೂಪಾ ಅವರ ಹೇಳಿಕೆ ನಿಜಾ ಅನ್ನೋದು ಮತ್ತೆ ಸಾಬೀತಾಗಿದೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಚಾಕು, ಮೊಬೈಲ್ ಸಿಮ್, ಗಾಂಜಾ ಸೇರಿದಂತೆ ಇನ್ನಿತರ ಅಕ್ರಮ ವಸ್ತುಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

ಆದ್ರೆ, ಡಿ. ರೂಪಾ ಅವರು ಆರೋಪ ಮಾಡಿದ ನಂತರ ಜೈಲಿನಲ್ಲಿ ಭದ್ರತೆ ಹೆಚ್ಚಿಸಿದ್ದು, ಪ್ರತಿವೋರ್ವ ಕೈದಿಗಳ ಮೇಲೆ ನಿಗಾ ಇಡಲಾಗಿತ್ತು.‌ ಅಷ್ಟಾದ್ರೂ ಕೂಡ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಹಲವಾರು ಲೋಪಗಳು ಕಂಡು ಬಂದಿವೆ. ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಜೈಲಿನ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು, ಅಲ್ಲಿ ದೊರೆತ ಚಾಕು‌, ಮೊಬೈಲ್, ಗಾಂಜಾ ಕುರಿತು ಉತ್ತರ ನೀಡುವಂತೆ ಸೂಚಿದ್ದಾರೆ ಎಂದು ತಿಳಿದುಬಂದಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು, ರೌಡಿ ಚಟುವಟಿಕೆಗಳಿಗೆ ಬ್ರೇಕ್ ಹಾಕಲು, ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದರು. ಹೀಗಾಗಿ ಕಾರಾಗೃಹದ ಮೇಲೆ ಸಿಸಿಬಿ ದಾಳಿ ಮಾಡಿ ಪ್ರತಿ ಬ್ಯಾರಕ್ ನಲ್ಲೂ ತಪಾಸಣೆ ನಡಸಿ 37 ಚಾಕು, ಡ್ರ್ಯಾಗರ್, ಗಾಂಜಾ ಮತ್ತು ಗಾಂಜಾ ಸೇವನೆ ಮಾಡುವ ಪೈಪ್, ಮೊಬೈಲ್ ಹಾಗೂ ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಲಾಗ್ತಿದೆ.

ABOUT THE AUTHOR

...view details