ಕರ್ನಾಟಕ

karnataka

ETV Bharat / state

ಡ್ರಗ್ಸ್​ ಜಾಲದ ನಂಟು ಆರೋಪ: ಸಿಸಿಬಿ ದಿಢೀರ್​ ದಾಳಿ ವೇಳೆ ಸಂಜನಾ ಕಿರಿಕ್ - Sandalwood Drugs link Case

ಸಿಸಿಬಿ ದಾಳಿ ವೇಳೆ ನಟಿ ಸಂಜನಾ ಅವರಿಗೆ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಕಚೇರಿಗೆ ಬರುವಂತೆ ಸೂಚಿಸಿದರು. ಈ ವೇಳೆ ಸಂಜನಾ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮನೆ ಪರಿಶೀಲನೆಗೆ ಸಂಜನಾ ಸಹಕಾರ ನೀಡದ ಹಿನ್ನೆಲೆ ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವು ಪಡೆದಿದ್ದಾರೆ.

CCB raid on actress Sanjana's house
ಸಂಜನಾ ಮನೆಯಲ್ಲಿ ಶೋಧ ಮಾಡುತ್ತಿರುವ ಸಿಸಿಬಿ ಅಧಿಕಾರಿಗಳು

By

Published : Sep 8, 2020, 10:38 AM IST

Updated : Sep 8, 2020, 11:05 AM IST

ಬೆಂಗಳೂರು:ಸ್ಯಾಂಡಲ್​ವುಡ್​ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲದಿಂದ ಸರ್ಚ್ ವಾರೆಂಟ್​ ಪಡೆದ ಸಿಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆ ಮೇಲೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಸಂಜನಾ ಅವರಿಗೆ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಕಚೇರಿಗೆ ಬರುವಂತೆ ಸೂಚಿಸಿದರು. ಈ ವೇಳೆ ಸಂಜನಾ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮನೆ ಪರಿಶೀಲನೆಗೆ ಸಂಜನಾ ಸಹಕಾರ ನೀಡದ ಹಿನ್ನೆಲೆ ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವು ಪಡೆದಿದ್ದಾರೆ.

ಸಂಜನಾ ಮನೆಯಲ್ಲಿ ಶೋಧ ಮಾಡುತ್ತಿರುವ ಸಿಸಿಬಿ ಅಧಿಕಾರಿಗಳು

ವಾರೆಂಟ್​ ಕೊಟ್ಟಿದ್ರೆ ನಾನೇ ಕಚೇರಿಗೆ ಬರುತ್ತಿದ್ದೆ. ನೀವು ನನಗೆ ನೋಟಿಸ್​ ನೀಡದೆ ಏಕಾಏಕಿ ಮನೆ ಮೇಲೆ ದಾಳಿ ಮಾಡಿದ್ದೀರಿ. ಆದ್ದರಿಂದ, ನಾನು ನಿಮ್ಮ ಜೊತೆ ವಿಚಾರಣೆಗೆ ಬರುವುದಿಲ್ಲವೆಂದು ಸಂಜನಾ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿರುವುದಾಗಿ ತಿಳಿದು ಬಂದಿದೆ. ಮೂಲಗಳ ಪ್ರಕಾರ, ಸಿಸಿಬಿ ಅಧಿಕಾರಿಗಳು ಈಗಾಗಲೇ ಸಂಜನಾರನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗೆ ಕಚೇರಿಗೆ ಕರೆದೊಯ್ಯುವ ಸಾಧ್ಯತೆಯಿದೆ.

Last Updated : Sep 8, 2020, 11:05 AM IST

ABOUT THE AUTHOR

...view details