ಬೆಂಗಳೂರು:ತಡರಾತ್ರಿ ಅಕ್ರಮ ಡ್ಯಾನ್ಸ್ ಬಾರ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೋಲಿಸರು 74 ಯುವತಿಯರನ್ನ ರಕ್ಷಣೆ ಮಾಡಿ 5 ಜನ ಆರೋಪಿಗಳನ್ನ ಬಂಧಿಸಿದ್ದಾರೆ.
ಅಕ್ರಮ ಡ್ಯಾನ್ಸ್ ಅಡ್ಡೆಗಳ ಮೇಲೆ ಸಿಸಿಬಿ ದಾಳಿ : ಐವರು ಆರೋಪಿಗಳ ಬಂಧನ - etv bharat
ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುತ್ತಿದ್ದ ದೊಮ್ಮಲೂರು ಬಳಿ ಇರುವ ಶೆಫ್ ಇನ್ ರೀಜೆನ್ಸಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ 74 ಯುವತಿಯರನ್ನು ರಕ್ಷಿಸಿದ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ರಮ ಡ್ಯಾನ್ಸ್ ಅಡ್ಡೆಗಳ ಮೇಲೆ ಸಿಸಿಬಿ ದಾಳಿ
ದೊಮ್ಮಲೂರು ಬಳಿ ಇರುವ ಶೆಫ್ ಇನ್ ರೀಜೆನ್ಸಿ ಹೆಸರಿನ ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ಎಸಿಪಿ ಎನ್.ಎಚ್ ರಾಮಚಂದ್ರಯ್ಯ ನೇತೃತ್ವದ ತಂಡ ದಾಳಿ ನಡೆಸಿದೆ.
ಪರವಾನಗಿ ನಿಬಂಧನೆಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದ ಮ್ಯಾನೇಜರ್ ದಿನೇಶ್, ದಿನೇಶ್ ಕುಮಾರ್, ರಿಯಾಜುದ್ದೀನ್, ಪ್ರಕಾಶ್ ದತ್ ಹಾಗೂ ಹೆಗ್ಯಾರಾಜ್ ಎಂಬ ಆರೋಪಿಗಳನ್ನ ಬಂಧಿಸಿ, 1,04,000 ನಗದು ವಶಕ್ಕೆ ಪಡೆದಿದ್ದಾರೆ.