ಕರ್ನಾಟಕ

karnataka

ETV Bharat / state

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​​​​ ಘಾಟು: ಇಂದ್ರಜಿತ್​​​​ ಹೇಳಿದ 15 ಮಂದಿಗೆ ನೋಟಿಸ್​ ನೀಡಲು ಸಿಸಿಬಿ ಸಿದ್ಧತೆ - ಚಂದನವನದಲ್ಲಿ ಡ್ರಗ್​ ದಂಧೆ

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​​​ ವಿಚಾರ ತಲೆ ಎತ್ತಿದ ಹಿನ್ನೆಲೆಯಲ್ಲಿ ಇಂದ್ರಜಿತ್​ ಲಂಕೇಶ್​ ಹೇಳಿದ 15 ನಟ-ನಟಿಯರಿಗೆ ನೋಟಿಸ್​ ನೀಡಲು ಸಿಸಿಬಿ ಮುಂದಾಗಿದೆ.

5 ಮಂದಿಗೆ ನೋಟೀಸ್​ ನೀಡಲು ಸಿಸಿಬಿ ತಯಾರು
5 ಮಂದಿಗೆ ನೋಟೀಸ್​ ನೀಡಲು ಸಿಸಿಬಿ ತಯಾರು

By

Published : Sep 1, 2020, 1:18 PM IST

ಬೆಂಗಳೂರು: ಚಂದನವನದಲ್ಲಿ ಡ್ರಗ್ಸ್​​​ ದಂಧೆ ನಡೆಯುತ್ತಿದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನಗರ ಪೊಲೀಸ್​ ಆಯುಕ್ತರು ಸಂಪೂರ್ಣವಾಗಿ ಭದ್ರತೆ ಕೊಡುತ್ತೇನೆಂದು ತಿಳಿಸಿದ್ದಾರೆ. ಸದ್ಯ 15 ನಟ-ನಟಿಯರ ಹೆಸರನ್ನು ಇಂದ್ರಜಿತ್​ ಪೊಲೀಸರಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ಸ್ಯಾಂಡಲ್​ವುಡ್​ ನಟ-ನಟಿಯರಿಗೆ ಸಂಕಷ್ಟ ಎದುರಾಗಿದ್ದು, ಇಂದ್ರಜಿತ್ ಲಂಕೇಶ್ ಹೇಳಿರುವ ಆ ನಟ-ನಟಿಯರಿಗೆ ಸಿಸಿಬಿ ಡ್ರಿಲ್ ಮಾಡಲು ಮುಂದಾಗಿದೆ. ಅಷ್ಟೇ ಅಲ್ಲದೆ ಆ. 15 ನಟ, ನಟಿಯರಿಗೆ ನೋಟಿಸ್ ನೀಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಚಂದನವನದ ಡ್ರಗ್ಸ್ ಜಾಲದ ಬಗ್ಗೆ ಕೆಲ‌ ದಾಖಲೆ‌ಗಳನ್ನು ಆಧರಿಸಿ ನೋಟಿಸ್ ನೀಡಲು ನಿರ್ಧಾರ ಮಾಡಿದ್ದು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಅವರ ಗಮನಕ್ಕೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಎಲ್ಲಾ ಮಾಹಿತಿ ನೀಡಿದ್ದಾರೆ. ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾಗೆ ರೋಚಕ ತಿರುವು ಸಿಕ್ಕಿದೆ.

ಮತ್ತೊಂದೆಡೆ ನಗರ ಪೊಲೀಸ್​ ಆಯುಕ್ತರ‌ ಕಚೇರಿಯಲ್ಲಿ ಸಭೆ ಕರೆದಿದ್ದು, ಹೆಚ್ಚುವರಿ ಆಯುಕ್ತರು ಹಾಗೂ ಎಲ್ಲಾ ವಲಯದ ಡಿಸಿಪಿಗಳು ಭಾಗಿಯಾಗಿದ್ದಾರೆ.

ABOUT THE AUTHOR

...view details