ಬೆಂಗಳೂರು: ಕನ್ನಡ ಚಿತ್ರರಂಗದ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ಡ್ರಗ್ ಪೆಡ್ಲರ್ಗಳನ್ನು ಮಟ್ಟ ಹಾಕಲು ಮುಂದಾಗಿದ್ದಾರೆ.
ನಟಿಯರಾದ ರಾಗಿಣಿ ಹಾಗೂ ಸಂಜನಾ ಆಪ್ತ ಎನ್ನಲಾದ ಮೆಸ್ಸಿ ಅಲಿಯಾಸ್ ಮೂಸಾನನ್ನು ಖೆಡ್ಡಾಕ್ಕೆ ಕೆಡವಿದರೆ ಬಹಳಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ. ಈತ ನಟಿ ರಾಗಿಣಿ ಹಾಗೂ ಸಂಜನಾಗೆ ಸಹಾಯಕನಾಗಿ ಕೆಲಸ ಮಾಡ್ತಿದ್ದ ಎಂದು ತಿಳಿದು ಬಂದಿದೆ.
ಭಟ್ಕಳದ ಮೂಸಾ ಒಳ್ಳೆಯ ನಡತೆ ಉಳ್ಳವನಂತೆ ಆ್ಯಕ್ಟಿಂಗ್ ಮಾಡ್ತಿದ್ದ. ಸಿಲಿಕಾನ್ ಸಿಟಿಯಲ್ಲಿ ಬಂದ ತಕ್ಷಣ ತನ್ನ ವರಸೆ ಬದಲಾಯಿಸಿಕೊಂಡ ಈತ ಮೆಸ್ಸಿ ಎಂಬ ಹೆಸರಿನಲ್ಲಿ ನಟಿಯರಿಗೆ ಪರಿಚಿತವಾಗಿದ್ದ. ಈತ ನಟಿಮಣಿಯರ ಹೈ-ಫೈ ಪಾರ್ಟಿಗಳಲ್ಲಿ ಭಾಗಿಯಾಗ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಈತ ನಟಿಮಣಿಯರ ಜೊತೆ ಸಹಾಯಕನಾಗಿದ್ದು ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ಎನ್ನಲಾಗ್ತಿದೆ. ಹೀಗಾಗಿ, ಸಿಸಿಬಿ ಪೊಲೀಸರು ಮೆಸ್ಸಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೆಸ್ಸಿ ಬಂಧನ ಮಾಡಿದ್ರೆ ಡ್ರಗ್ಸ್ ವಹಿವಾಟು ಮತ್ತು ಚಲನವನಗಳು ಇನ್ನಷ್ಟು ಬಯಲಾಗುವ ಸಾಧ್ಯತೆ ಇದೆ. ಅಷ್ಟು ಮಾತ್ರವಲ್ಲದೇ, ಇವರ ಜೊತೆ ಇನ್ನಷ್ಟು ಸಂಪರ್ಕ ಇರುವ ನಟರ ಮಾಹಿತಿ ಕೂಡ ಈತನಿಗಿದೆ ಎನ್ನಲಾಗ್ತಿದೆ.