ಬೆಂಗಳೂರು: ಇದೇ ಫೆಬ್ರವರಿ 28ಕ್ಕೆ ನಿಗದಿಯಾಗಿರುವ ಎಫ್ಡಿಎ ಪರೀಕ್ಷೆ ಮೇಲೆ ಸಿಸಿಬಿ ಹದ್ದಿನ ಕಣ್ಣಿಟ್ಟಿದೆ.
ಈ ಹಿಂದೆ ನಿಗದಿಯಾಗಿದ್ದ ಎಫ್ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದ ಆರೋಪದ ಮೇಲೆ 14 ಜನರನ್ನು ಸಿಸಿಬಿ ಈಗಾಗಲೇ ಬಂಧಿಸಿದೆ. ಈಗ ಇದೇ ತಿಂಗಳು 28ರಂದು ಮತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪ್ರಶ್ನೆ ಪತ್ರಿಕೆ ಪ್ರಿಂಟಿಂಗ್ನಿಂದ ಹಿಡಿದು ಪರೀಕ್ಷಾ ಸ್ಥಳ ತಲುಪುವವರೆಗೂ ಸಿಸಿಬಿ ನಿಗಾ ವಹಿಸಲಿದೆ.