ಕರ್ನಾಟಕ

karnataka

ETV Bharat / state

ಬೆಂಗಳೂರು: ಕೊಟ್ಟ ಸಾಲಕ್ಕೆ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪಿ ಅಂದರ್​ - Bangalore latest crime news

ಜನರಿಗೆ ಸಾಲ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕಪಾಲಿ ಮೋಹನ್ ಆಪ್ತನಾಗಿದ್ದ ನಾಗರಾಜ್, ವೈಯಾಲಿಕಾವಲ್, ಮಲ್ಲೇಶ್ವರಂ ಸುತ್ತಮುತ್ತಲಿನ ಉದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಸಾಲ ನೀಡಿದ್ದ. ದಿನದ ಲೆಕ್ಕದಲ್ಲಿ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದು, ಕೊಟ್ಟ ಸಾಲಕ್ಕೆ ಸುಮಾರು ಶೇ.60ರಷ್ಟು ಬಡ್ಡಿ ಪಡೆಯುತ್ತಿದ್ದ ಎನ್ನಲಾಗ್ತಿದೆ.

CCB police have arrested scoundre
ನಾಗರಾಜ ಶೆಟ್ಟಿ ಬಂಧಿತ ಆರೋಪಿ

By

Published : Dec 6, 2020, 12:12 PM IST

ಬೆಂಗಳೂರು: ಸಾಲ ನೀಡಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ನಾಗರಾಜ್​ ಶೆಟ್ಟಿ ಬಂಧಿತ ಆರೋಪಿ. ಮೂಲತಃ ಶಿವಮೊಗ್ಗದವನಾದಈತ ಬೆಂಗಳೂರಿನ ವೈಯಾಲಿಕಾವಲ್​ನಲ್ಲಿ ಬಾಲಾಜಿ ಫಿನಾನ್ಸ್ ನಡೆಸುತ್ತಿದ್ದ. ಮೃತ ಕಪಾಲಿ ಮೋಹನ್ ಆಪ್ತನಾಗಿದ್ದ ನಾಗರಾಜ್, ವೈಯಾಲಿಕಾವಲ್, ಮಲ್ಲೇಶ್ವರಂ ಸುತ್ತಮುತ್ತಲಿನ ಉದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಸಾಲ ನೀಡಿದ್ದ. ದಿನದ ಲೆಕ್ಕದಲ್ಲಿ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದು, ಒಂದು ವರ್ಷಕ್ಕೆ ತಾನು ಕೊಟ್ಟ ಸಾಲಕ್ಕೆ ಸುಮಾರು ಶೇ.60ರಷ್ಟು ಬಡ್ಡಿ ಪಡೆಯುತ್ತಿದ್ದ ಎನ್ನಲಾಗ್ತಿದೆ. ಅಲ್ಲದೇ ಕನ್ನಡದ ಕೆಲ ಸಿನಿಮಾಗಳಲ್ಲಿ ನಾಗರಾಜ್ ನಟನೆ ಮಾಡಿರುವುದಾಗಿ ತಿಳಿದು ಬಂದಿದೆ.

ಬಂಧಿತನಿಂದ 164 ಚೆಕ್, 84 ಪ್ರಾಮಿಸರಿ ನೋಟ್ಸ್, ಆಸ್ತಿ ದಾಖಲೆಗಳು ಹಾಗೂ 22 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಈತನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ABOUT THE AUTHOR

...view details