ಕರ್ನಾಟಕ

karnataka

ETV Bharat / state

ಡ್ರಗ್​ ಜಾಲ ನಂಟು ಆರೋಪ ಪ್ರಕರಣ: ದಿಗಂತ್​ ದಂಪತಿ ಕುರಿತು ಸಾಕ್ಷ್ಯ ಕಲೆಹಾಕಲು ಮುಂದಾದ ಸಿಸಿಬಿ - CCB Police

ಡ್ರಗ್ಸ್​​ ಲಿಂಕ್ ಪ್ರಕರಣದ ಪ್ರಮುಖ ಆರೋಪಿಗಳ ಜೊತೆ ಮಾತುಕತೆ ನಡೆಸಿರುವ ಕಾಲ್ ಡಿಟೇಲ್ಸ್ ಹಾಗೂ ಮೆಸೇಜ್​​​​ಗಳನ್ನು ಡಿಲಿಟ್​​​ ಮಾಡಿರುವ ಕಾರಣ ಸದ್ಯ ಸಿಸಿಬಿ ಪೊಲೀಸರಿಗೆ ಅನುಮಾನ ಮೂಡಿದೆ. ಸದ್ಯ ಪ್ರಮುಖ ಸಾಕ್ಷ್ಯ ಕಲೆ ಹಾಕಿ ಇದರ ಆಧಾರದ ಮೇರೆಗೆ ತಾರಾದಂಪತಿ ದಿಗಂತ-ಐಂದ್ರಿತಾ ಅವರನ್ನು ತನಿಖೆ ನಡೆಸಲು ಮುಂದಾಗಿದ್ದಾರೆ.

ccb-police-decided-to-collect-documents-about-dighant-and-aindrita-ray
ಡ್ರಗ್​ ಜಾಲ ನಂಟು ಆರೋಪ ಪ್ರಕರಣ: ದಿಗಂತ್​ ದಂಪತಿ ಕುರಿತು ಸಾಕ್ಷ್ಯ ಕಲೆಹಾಕಲು ಮುಂದಾದ ಸಿಸಿಬಿ

By

Published : Sep 17, 2020, 1:41 PM IST

Updated : Sep 17, 2020, 2:20 PM IST

ಬೆಂಗಳೂರು: ದಿಗಂತ್​​ ಜೋಡಿಯ ವಿಚಾರಣೆ ನಡೆಸಿದ ಬಳಿಕ ಸಿಸಿಬಿ ಪೊಲೀಸರು ಸ್ಟಾರ್ ಜೋಡಿಗಳು ತನಿಖಾಧಿಕಾರಿಗಳ ದಾರಿ ತಪ್ಪಿಸಿರೋದು ಬೆಳಕಿಗೆ ಬಂದಿದೆ. ಹೀಗಾಗಿ ಡ್ರಗ್ಸ್​​​ ನಂಟು ಆರೋಪಕ್ಕೆ ಸಿಲುಕಿರುವ ದಿಗಂತ್ ಹಾಗೂ ಐಂದ್ರಿತಾ ರೈಗೆ ಸಂಬಂಧಿಸಿದಂತೆ ಸಾಕ್ಷ್ಯಗಳ ಕಲೆ ಹಾಕಲು ಸಿಸಿಬಿಯ ಇನ್ನೊಂದು ತಂಡ‌ ಮುಂದಾಗಿದೆ ಎಂದು ಹೇಳಲಾಗ್ತಿದೆ.

ಅಲ್ಲದೆ ಸದ್ಯ ಈ ದಂಪತಿ ಕೆಲವು ಸಂದೇಶಗಳನ್ನು ಡಿಲಿಟ್ ಮಾಡಿರುವ ವಿಚಾರ ಸಹ ಗೊತ್ತಾಗಿದೆ. ಅಷ್ಟು ಮಾತ್ರವಲ್ಲದೇ ಪ್ರಕರಣದ ಪ್ರಮುಖ ಆರೋಪಿಗಳಾದ ಫಾಜೀಲ್, ಆದಿತ್ಯ ಆಳ್ವ, ರವಿಶಂಕರ್, ವಿರೇನ್ ಖನ್ನಾ, ರಾಹುಲ್ ಕೂಡ ಆಪ್ತರಾಗಿದ್ದಾರೆ ಎನ್ನಲಾಗ್ತಿದೆ‌.

ಈ ಬಗ್ಗೆ ಪ್ರಶ್ನಿಸಿದ್ರೆ ಈ ಆರೋಪಿಗಳ ಜೊತೆ ಸ್ನೇಹ ಇದ್ದಿದ್ದು ನಿಜ. ಆದ್ರೆ ನಾವು ಕ್ಯಾಸಿನೋ ಪಾರ್ಟಿಗೆ ಆಹ್ವಾನದ ಮೇರೆಗೆ ಭಾಗವಹಿಸಿದ್ದೆವು. ಡ್ರಗ್ಸ್​ ಮಾರಾಟ ಅಥವಾ ಸೇವನೆ ಮಾಡಿಲ್ಲ ಎಂಬ ಉತ್ತರ ನೀಡಿದ್ದಾರೆ.

ಈ ಆರೋಪಿಗಳ ಜೊತೆ ಮಾತುಕತೆ ನಡೆಸಿರುವ ಕಾಲ್ ಡಿಟೇಲ್ಸ್ ಹಾಗೂ ಮೆಸೇಜ್​​​​ಗಳನ್ನು ಡಿಲಿಟ್​​​ ಮಾಡಿರುವ ಕಾರಣ ಸದ್ಯ ಸಿಸಿಬಿ ಪೊಲೀಸರಿಗೆ ಅನುಮಾನ ಮೂಡಿದ್ದು, ಸದ್ಯ ಪ್ರಮುಖ ಸಾಕ್ಷ್ಯ ಕಲೆ ಹಾಕಿ ಇದರ ಆಧಾರದ ಮೇರೆಗೆ ತನಿಖೆ ನಡೆಸಲು ಮುಂದಾಗಿದ್ದಾರೆ.

ನಿನ್ನೆ ಸಿಸಿಬಿ ಅಧಿಕಾರಿಗಳು ದಿಗಂತ್​​​​ ದಂಪತಿಗೆ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದು, ಪ್ರಕರಣ ಕುರಿತು ದ್ವಂದ್ವ ಹೇಳಿಕೆ ನೀಡಿರುವುದು ತಿಳಿದುಬಂದಿದೆ. ಇದೀಗ ಇವರಿಬ್ಬರೂ ಪಾರ್ಟಿಯಲ್ಲಿ ಭಾಗಿಯಾಗಿರುವ ಕುರಿತು ಕೆಲ ಸಾಕ್ಷ್ಯಗಳು ದೊರೆತಿದ್ದು, ಈ ಆಧಾರದ ಮೇಲೆ ಸಿಸಿಬಿ ತನಿಖೆ ಮುಂದುವರೆಸಲಿದೆ.

Last Updated : Sep 17, 2020, 2:20 PM IST

ABOUT THE AUTHOR

...view details