ಕರ್ನಾಟಕ

karnataka

ETV Bharat / state

ಸಿಸಿಬಿ ಅಧಿಕಾರಿಗಳ ಲಂಚ ಆರೋಪ ಪ್ರಕರಣ: ಎಫ್​ಐಆರ್​ನಲ್ಲಿ ಮತ್ತಿಬ್ಬರ ಹೆಸರು ಸೇರ್ಪಡೆ - ಸಿಸಿಬಿ ಅಧಿಕಾರಿಗಳ ಲಂಚ ಆರೋಪ ಪ್ರಕರಣ

ಲಾಕ್​​ಡೌನ್ ಅವಧಿಯಲ್ಲಿ ಸಿಗರೇಟು ಕಂಪನಿ ಹಾಗೂ ಮಾಸ್ಕ್ ಡಿಲರ್ಸ್​​ಗಳಿಂದ ಕೋಟಿಗಟ್ಟಲೆ ಲಂಚ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರ ಮೇಲೆ ಎಸಿಬಿ ಎಫ್​ಐಆರ್​ ದಾಖಲಿಸಿದೆ.

CCB police bribery case
ಸಿಸಿಬಿ ಅಧಿಕಾರಿಗಳ ಲಂಚ ಆರೋಪ ಪ್ರಕರಣ

By

Published : May 26, 2020, 10:45 AM IST

ಬೆಂಗಳೂರು: ಸಿಸಿಬಿ ಅಧಿಕಾರಿಗಳು ಸಿಗರೇಟು ಡೀಲರ್​ಗಳಿಂದ ಹಣ ಸುಲಿಗೆ ಮಾಡಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್​ ಅಧಿಕಾರಿಗಳ ವಿರುದ್ಧ ಈಗಾಗಲೇ ಎಫ್​ಐಆರ್​ ದಾಖಲಾಗಿದ್ದು, ಇವರ ಜೊತೆ ಮತ್ತಿಬ್ಬರ ಹೆಸರುಗಳನ್ನು ಎಫ್​ಐಆರ್​​ನಲ್ಲಿ ನಮೂದಿಸಲಾಗಿದೆ ಎಂದು ತಿಳಿದು ಬಂದಿದೆ.

ಎಫ್​ಐಆರ್​ ಪ್ರತಿ

ಬಳ್ಳಾರಿ ಮೂಲದ ಬಾಬು ರಾಜೇಂದ್ರ ಪ್ರಸಾದ್ ನಾಲ್ಕನೇ ಆರೋಪಿಯಾಗಿದ್ದು, ಈತನೇ ಹಗರಣದಲ್ಲಿ ಭಾಗಿಯಾದ ಪೊಲೀಸರಿಗೆ ಡೀಲ್ ತಂದಿದ್ದ ಎನ್ನುವ ವಿಚಾರ ತನಿಖೆ ವೇಳೆ ಬಯಲಾಗಿದೆ. ಈತ ಓರ್ವ ಪ್ರಭಾವಿ ಸಚಿವರ ಜೊತೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗುತ್ತಿದೆ.

ಆರೋಪಿ ರಾಜೇಂದ್ರ ಪ್ರಸಾದ್ ಸೂಚನೆ ಮೇರೆಗೆ ಸಿಸಿಬಿಯ ಎಸಿಪಿ, ಇಬ್ಬರು ಇನ್ಸ್​ಪೆಕ್ಟರ್​ಗಳು ಸಿಗರೇಟು ವಿತರಕರು ಹಾಗೂ ಮಾಸ್ಕ್​ ತಯಾರಿ ಮಾಡುತ್ತಿದ್ದ ಕಂಪನಿ ಮಾಲೀಕರಿಂದ ಲಂಚ ಪಡೆದು ಅವರವರೇ ಹಂಚಿಕೊಳ್ಳುವ ಮಾತುಕತೆ ನಡೆದಿತ್ತಂತೆ. ಆದರೆ ಅಷ್ಟರಲ್ಲೇ ಆರೋಪಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಸಿಸಿಬಿಯಲ್ಲಿ ಎಸಿಪಿಯಾಗಿದ್ದ ಪ್ರಭುಶಂಕರ್​, ಇನ್ಸ್​ಪೆಕ್ಟರ್​ಗಳಾದ ಅಜಯ್ ಹಾಗೂ ನಿರಂಜನ್ ‌ಅಧಿಕಾರ ದುರುಪಯೋಗ ಮಾಡಿಕೊಂಡು ಕೋಟಿಗಟ್ಟಲೆ ಹಣ ಲಂಚ ಪಡೆದ ಆರೋಪದಡಿ ಅಮಾನತು ಆಗಿದ್ದಾರೆ. ಮತ್ತೊಂದೆಡೆ ಎಸಿಬಿಯಲ್ಲಿ ಕೂಡ ಎಫ್ಐಆರ್ ದಾಖಲಾಗಿರುವ ಕಾರಣ ಇಂದು ಅಧಿಕಾರಿಗಳು ತನಿಖೆಗೆ ಹಾಜರಾಗುವುದು ಅನಿವಾರ್ಯವಾಗಿದೆ.

ABOUT THE AUTHOR

...view details