ಬೆಂಗಳೂರು :ರಾತ್ರಿ ವೇಳೆ ಒಂಟಿಯಾಗಿ ಸಂಚರಿಸುವವರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿ ಅವರಿಂದ ಹಣ, ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ ದರೋಡೆಕೋರರನ್ನು ಸಿಸಿಬಿಯ ಸಂಘಟಿತ ಅಪರಾಧ ದಳ ಪೊಲೀಸರು ಬಂಧಿಸಿದ್ದಾರೆ.
ಮಾರಕಾಸ್ತ್ರ ಹಿಡಿದು ದರೋಡೆಗೆ ಸಜ್ಜಾಗಿದ್ದವರ ಪ್ಲಾನ್ ವಿಫಲಗೊಳಿಸಿದ ಸಿಸಿಬಿ - Conspiracy theft
ಆರೋಪಿಗಳು ನಗರದ ಹಲವೆಡೆ ಕೊಲೆ ಹಾಗೂ ದರೋಡೆ ಯತ್ನ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದು, ಈ ಸಂಬಂಧ ವಿವಿಧ ಠಣೆಗಳಲ್ಲಿ ಪ್ರರಕಣ ದಾಖಲಾಗಿವೆ..
ಸಿಸಿಬಿ
ಸಂತೋಷ್, ಮಂಜುನಾಥ, ವಿನಯ್ ಕುಮಾರ್ ಎಂಬುವರೇ ಬಂಧಿತ ಆರೋಪಿಗಳು. ಇವರೆಲ್ಲರೂ ನಗರದ ಹಲವೆಡೆ ಕೊಲೆ ಹಾಗೂ ದರೋಡೆ ಯತ್ನ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದು ಈ ಸಂಬಂಧ ವಿವಿಧ ಠಣೆಗಳಲ್ಲಿ ಪ್ರರಕಣ ದಾಖಲಾಗಿವೆ.
ಇದನ್ನೂ ಓದಿ.. ಚಿರತೆ ಚರ್ಮ ಮಾರಾಟಕ್ಕೆ ಯತ್ನ: ಆರೋಪಿ ಬಂಧನ
ಗುರುವಾರ ರಾತ್ರಿ ಸಂಪಂಗಿ ರಾಮನಗರ ಠಾಣಾ ವ್ಯಾಪ್ತಿಯ ಜನನಿಬಿಡ ರಸ್ತೆಯೊಂದರಲ್ಲಿ ನಿಂತು, ದಾರಿಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅವರಿಂದ ನಗದು-ಚಿನ್ನಾಭರಣಗಳನ್ನು ದೋಚಲು ಆರೋಪಿಗಳು ಸಜ್ಜಾಗಿದ್ದರು. ಈ ಕುರಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಗಳ ಪ್ಲಾನ್ ವಿಫಲಗೊಳಿಸಿ ಬಂಧಿಸಿದ್ದಾರೆ.