ಬೆಂಗಳೂರು: ಅಪರಾಧ ಲೋಕದಲ್ಲಿ ಸಕ್ರಿಯನಾಗಿದ್ದ ಕೋಣನಕುಂಟೆ ಪೊಲೀಸ್ ಠಾಣೆಯ ರೌಡಿಶೀಟರ್ ಸಂತೋಷ ಕುಮಾರ್‌ನನ್ನ ಸಿಸಿಬಿಯ ರೌಡಿನಿಗ್ರಹ ದಳದ ಆಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದಾರೆ.
ಕಳೆದ ಫೆ. 27ರಂದು ಹುಳಿಮಾವು ಠಾಣಾ ವ್ಯಾಪ್ತಿಯ ಉಡುಪಿ ಗಾರ್ಡೇನಿಯಾ ಹತ್ತಿರ ಮಾರಕಾಸ್ತ್ರ ತೋರಿಸಿ ಸಾರ್ವಜನಿಕರ ಬಳಿ ರಾಬರಿ ಮಾಡಿದ್ದ. ಮಾರಕಾಸ್ತ್ರ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.