ಕರ್ನಾಟಕ

karnataka

ETV Bharat / state

ದರೋಡೆಗೆ ಹೊಂಚು ಹಾಕಿದ್ದ ನಾಲ್ವರು ಖದೀಮರ ಹೆಡೆಮುರಿ ಕಟ್ಟಿದ ಸಿಸಿಬಿ - robbers in Banglore

ನಿನ್ನೆ ರಾತ್ರಿ ಹನುಮಂತಪ್ಪ ಲೇಔಟ್ ಬಳಿ ನಾಲ್ವರು ದರೋಡೆಕೋರರು ದಾರಿಹೋಕರಿಗೆ ಮಾರಕಾಸ್ತ್ರ ತೋರಿಸಿ, ಅವರ ಬಳಿಯಿದ್ದ ಹಣ, ಚಿನ್ನಾಭರಣಗಳನ್ನು ದೋಚಲು ಯತ್ನಿಸುತ್ತಿದ್ದ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ದರೋಡೆಕೋರರು

By

Published : Sep 1, 2019, 4:47 PM IST

ಬೆಂಗಳೂರು: ದರೋಡೆ ಮಾಡಲು ಹೊಂಚು ಹಾಕಿದ್ದ ನಾಲ್ವರು ಖದೀಮರ ಹೆಡೆಮುರಿ ಕಟ್ಟುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಿನ್ನೆ ರಾತ್ರಿ ಹನುಮಂತಪ್ಪ ಲೇಔಟ್ ಬಳಿ ನಾಲ್ವರು ದರೋಡೆಕೋರರು ದಾರಿಹೋಕರಿಗೆ ಮಾರಕಾಸ್ತ್ರ ತೋರಿಸಿ, ಅವರ ಬಳಿಯಿದ್ದ ಹಣ, ಚಿನ್ನಾಭರಣಗಳನ್ನು ದೋಚಲು ಯತ್ನಿಸುತ್ತಿದ್ದ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಸಂಘಟಿತ ಅಪರಾಧ ದಳದ ಎಸಿಪಿ ನಾಗರಾಜ್ ನೇತೃತ್ವದ ತಂಡ, ಮಾರಕಾಸ್ತ್ರಗಳ ಸಮೇತ ದರೋಡೆಕೋರರನ್ನು ವಶಕ್ಕೆ ಪಡೆದಿದ್ದಾರೆ.

ಜಗದೀಶ್, ಸತ್ಯರಾಜ್, ರವಿಕಿರಣ್ ಹಾಗೂ ನಿಖಿಲ್ ಬಂಧಿತ ದರೋಡೆಕೋರರು. ಒಂದು ಲಾಂಗ್, ಕತ್ತಿ, ಖಾರದಪುಡಿ ಪೊಟ್ಟಣಗಳನ್ನು ಈ ಖತರ್ನಾಕ್​ ದರೋಡೆಕೋರರಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪೈಕಿ ಜಗ್ಗದೀಶ್ ಅಲಿಯಾಸ್ ಉಲ್ಲಾಳ ಜಗ್ಗನ ಮೇಲೆ ಅತ್ಯಾಚಾರ ಹಾಗೂ ಕೊಲೆ ಯತ್ನ ಕೇಸ್​, ಸತ್ಯರಾಜ್ ಮೇಲೆ ಕೊಲೆ ಪ್ರಕರಣ, ಕಿರಣ್ ಮೇಲೆ ದರೋಡೆ ಯತ್ನದ ಪ್ರಕರಣಗಳು ದಾಖಲಾಗಿವೆ.

ABOUT THE AUTHOR

...view details