ಬೆಂಗಳೂರು:ರಾಜ್ಯಾದ್ಯಂತ ಕೊರೊನಾ ಭೀತಿ ಹೆಚ್ಚಾಗುತ್ತಿದ್ದು, ಇದನ್ನು ದುರುಪಯೋಗ ಮಾಡಿಕೊಂಡ ಕೆಲಕಿಡಿಗೇಡಿಗಳು ನಕಲಿ ಸ್ಯಾನಿಟೈಸರ್ ಹಾಗೂ ಹ್ಯಾಂಡ್ ರಬ್ಗಳನ್ನು ಸಿದ್ದಪಡಿಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಸಿಸಿಬಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ರಾಜು, ಚಂದನ್ ಬಂಧಿತ ಆರೋಪಿಗಳು. ಇವರು ಜ್ಯೋತಿ ಕೆಮಿಕಲ್ಸ್ ಗೋಡನ್ ಹಾಗೂ ಸ್ವಾತಿ ಗೋಡನ್ನಲ್ಲಿ ನಕಲಿ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಹ್ಯಾಂಡ್ ರಬ್ಗಳನ್ನು ಸಿದ್ಧಪಡಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ತಿಳಿದು ದಾಳಿ ನಡೆಸಿದ ಸಿಸಿಬಿ ಪೊಲೀಸರು, ಮಾರಾಟಕ್ಕೆ ಇಟ್ಟಿದ್ದಂತಹ 8500 ಬಾಟಲ್ಗಳು, ಖಾಲಿ ಪ್ಲಾಸ್ಟಿಕ್ ಬಾಟಲ್ಗಳು, ಒಟ್ಟು 4500 ನ 35 ಲೀಟರ್ನ ಐಸೊಪ್ರೊಪಿಲ್ ಆಲ್ಕೋಹಾಲ್( isopropyl alcohol ) 8 ಕ್ಯಾನ್ಗಳು ಸೇರಿದಂತೆ ಒಟ್ಟು 280 ಲೀಟರ್ 4500 ಸ್ಟಿಕರ್ ವಶಪಡಿಸಿದ್ದಾರೆ.
ಯಾವ ರೀತಿ ತಯಾರಿಸುತ್ತಿದ್ದರು: