ಕರ್ನಾಟಕ

karnataka

ETV Bharat / state

ಜೈಲಿಂದ ಹೊರಬಂದ್ರೂ ಬಿಡಲಿಲ್ಲ ಹಳೆಯ ಚಾಳಿ; ಗೂಂಡಾ ಕಾಯ್ದೆಯಡಿ ರೌಡಿಶೀಟರ್ ಅರೆಸ್ಟ್ - ಗೂಂಡಾ ಆ್ಯಕ್ಟ್

ಜಾಮೀನು ಪಡೆದು ಜೈಲಿನಿಂದ ಹೊರಬಂದು ಹಳೆಯ ಚಾಳಿ ಮುಂದುವರೆಸುತ್ತಿದ್ದ ರೌಡಿಶೀಟರ್‌ನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರೌಡಿ ಶೀಟರ್ ಶಿವರಾಜ್ ಬಿನ್ ಕೃಷ್ಣಪ್ಪ

By

Published : Oct 15, 2019, 11:48 AM IST

ಬೆಂಗಳೂರು :ಅನೈತಿಕಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದ ರೌಡಿಶೀಟರ್ ಶಿವರಾಜ್ ಬಿನ್ ಕೃಷ್ಣಪ್ಪನನ್ನು ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಶಿವರಾಜ್ ಬಿನ್ ಕೃಷ್ಣಪ್ಪ, ಭಟ್ಟಿ ಸಾರಾಯಿ ವ್ಯವಹಾರ, ಸುಲಿಗೆ, ಔಷಧಾಪರಾಧ ಇತ್ಯಾದಿ ಅಕ್ರಮ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ.

ಪೊಲೀಸರು ಹಲವು ಬಾರಿ ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ರೂ ಕೂಡಾ ಜಾಮೀನಿನ ಮೇಲೆ ಹೊರಬರುತ್ತಿದ್ದ. ಇದೀಗ ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈತನ ವಿರುದ್ಧ 2 ಕೊಲೆ, 2 ಕೊಲೆ‌ ಪ್ರಯತ್ನ, 1 ದರೋಡೆಗೆ ಸಿದ್ಧತೆ, 1 ದೊಂಬಿ ಸೇರಿದಂತೆ ಒಟ್ಟು ಏಳು ಪ್ರಕರಣಗಳು ದಾಖಲಾಗಿವೆ.

ABOUT THE AUTHOR

...view details