ಬೆಂಗಳೂರು:ಲಾಕೌಡೌನ್ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಪರವಾನಗಿ ಇಲ್ಲದೆ ಆನ್‌ಲೈನ್ ಗೇಮ್ ಆಡುವವರ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಸಿಸಿಬಿ ಪೊಲೀಸರು ಈ ಆಟದಲ್ಲಿ ತೊಡಗಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆನ್‌ಲೈನ್ ಮೂಲಕ ಪೋಕರ್ ಗೇಮ್ ಆಡುತ್ತಿದ್ದ ಆರೋಪಿಗಳ ಬಂಧನ - ಪೋಕರ್ ಆಡುತ್ತಿದ್ದ ಆರೋಪಿಗಳು ಅಂದರ್
ಆನ್‌ಲೈನ್ ಮೂಲಕ ಪೋಕರ್ ಗೇಮ್ ಆಟದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುನಿರಾಜ್, ಶಂಕರಪ್ಪ, ಮಹಮ್ಮದ್ ಜಾಬೀರ್ ಬಂಧಿತ ಆರೋಪಿಗಳು. ನಗರದ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ಆರೋಪಿಗಳು, ಮೊಬೈಲ್ ಫೋನ್ನಲ್ಲಿ ವಾಟ್ಸ್ ಆ್ಯಪ್ ಗ್ರೂಪ್ ಮಾಡಿಕೊಂಡು ಜೂಜಾಟ ಆಡುವ ಪಂಟರ್ಗಳಿಂದ ಹಣ ಕಟ್ಟಿಸಿಕೊಂಡು ಲೈಸೆನ್ಸ್ ಇಲ್ಲದೇ ಪೋಕರ್ ಗೇಮ್ ಆಟವಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಗಳನ್ನ ಬಂಧಿಸಲಾಗಿದ್ದು ಮೊಬೈಲ್, ಹಣ ವಶಪಡಿಸಿಕೊಳ್ಳಲಾಗಿದೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮತ್ತೋರ್ವ ಕಿಂಗ್ ಪಿನ್ ಕಿಶೋರ್ ಎಂಬಾತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಕುರಿತು ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.