ಕರ್ನಾಟಕ

karnataka

ETV Bharat / state

ನಕಲಿ ಶ್ಯೂರಿಟಿ ನೀಡಿ ಕಾನೂನು ಕಣ್ಣಿಗೆ ಮಣ್ಣೆರೆಚುತ್ತಿದ್ದ ವಂಚಕರು ಅಂದರ್​ - CCB police latest news

ಇತರೆ ವ್ಯಕ್ತಿಗಳ ಭೂ ದಾಖಲೆಗಳು, ವೋಟರ್ ಐಡಿಗಳನ್ನ ನಕಲು ಮಾಡಿ ಹಲವಾರು ಸೂಕ್ಷ್ಮ ಪ್ರಕರಣಗಳ ಆರೋಪಿಗಳಿಗೆ ಜಾಮೀನು ನೀಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಆರೋಪಿಗಳು

By

Published : Nov 14, 2019, 11:16 AM IST

ಬೆಂಗಳೂರು:ಹಲವು ಅಪರಾಧ ಪ್ರಕರಣಗಳಿಗೆ ನಕಲಿ ಜಾಮೀನು ನೀಡಿ ಕಾನೂನಿಗೆ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಸವ ಕುಮಾರ್, ರಮಾದೇವಿ, ಮಧುಕುಮಾರ್ ಹಾಗೂ ರತ್ನಮ್ಮ ಬಂಧಿತರು. ಆರೋಪಿಗಳು ಇತರೆ ವ್ಯಕ್ತಿಗಳ ಭೂ ದಾಖಲೆಗಳು, ವೋಟರ್ ಐಡಿಗಳನ್ನ ನಕಲು ಮಾಡಿ ಹಲವಾರು ಸೂಕ್ಷ್ಮ ಪ್ರಕರಣಗಳ ಆರೋಪಿಗಳಿಗೆ ಜಾಮೀನು ನೀಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಆರೋಪಿಗಳಿಂದ ಕಮೀಷನ್ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಇಂತಹ ವಂಚನೆ ಜಾಲ ಹಲವು ವರ್ಷಗಳಿಂದ ನಡೆಸುತ್ತಿದ್ದರು ಎಂದು‌ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸದ್ಯ ಬಂಧಿತರಿಂದ ಆಧಾರ್ ಕಾರ್ಡ್​ಗಳು, ಗ್ರಾಮ ಲೆಕ್ಕಿಗರ ಸೀಲ್, ನಕಲಿ ಭೂ ದಾಖಲೆಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details