ಬೆಂಗಳೂರು: ಫಾರಿನ್ ಕಂಟ್ರಿಯಲ್ಲಿ ಕೆಲಸ ಕೊಡಿಸ್ತೀನಿ ಅಂತಾ ಕಂಪನಿ ತೆರೆದು ಹಲವಾರು ಜನರಿಗೆ ಮೋಸ ಮಾಡಿದ ವ್ಯಕ್ತಿಯನ್ನ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಿದೇಶದಲ್ಲಿ ಕೆಲಸ ಕೊಡಿಸುವ ನಕಲಿ ಆಸಾಮಿ ಬಂಧಿಸಿದ ಸಿಸಿಬಿ ಪೊಲೀಸರು.. - ಸಿಸಿಬಿ ಪೊಲೀಸರಿಂದ ವಶ
ಫಾರಿನ್ ಕಂಟ್ರಿಯಲ್ಲಿ ಕೆಲಸ ಕೊಡಿಸ್ತೀನಿ ಅಂತಾ ಕಂಪನಿ ತೆರೆದು ಹಲವಾರು ಜನರಿಗೆ ಮೋಸ ಮಾಡಿದ ವ್ಯಕ್ತಿಯನ್ನ ಬಂಧಿಸುವಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿದೇಶದಲ್ಲಿ ಕೆಲಸ ಕೊಡ್ಸೊ ನಕಲಿ ಅಸಾಮಿಯನ್ನ ಬಂಧಿಸಿದ ಸಿಸಿಬಿ ಪೋಲಿಸ್
ಪ್ರದೀಪ್ ಕುಮಾರ್ ಬಂಧಿತ ಆರೋಪಿ ಎನ್ನಲಾಗಿದೆ. ರಾಜಾಜಿನಗರ ರಾಜಮಾರ್ ರಸ್ತೆಯಲ್ಲಿ 'ಸಿ ವರ್ಡ್' ಫಾರಿನ್ ಕಂಪೆನಿ ತೆರೆದು, ಯುವಕ-ಯುವತಿಯರನ್ನ ಟಾರ್ಗೆಟ್ ಮಾಡಿ ಕೆಲಸ ಕೊಡಿಸ್ತಿನಿ ಎಂದು ನಂಬಿಸಿ ಜಾಹೀರಾತು ನೀಡ್ತಿದ್ದ. ಇದನ್ನ ನೋಡಿ ಬಂದ ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ಮೋಸ ಮಾಡಿದ್ದ. ಹೀಗಾಗಿ ನೊಂದವರು ಸಿಸಿಬಿಗೆ ದೂರು ನೀಡಿದ್ದರು.