ಬೆಂಗಳೂರು:ಕರ್ನಾಟಕ ರಾಜ್ಯ ಕೃಷಿ ಮಂಡಳಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ಕಳೆದ ವರ್ಷ ಡಿಸೆಂಬರ್ನಲ್ಲಿ ಎಪಿಎಂಸಿಗೆ ಸೇರಿದ್ದ 50 ಕೋಟಿ ಹಣ ದುರುಪಯೋಗವಾಗಿತ್ತು. ಇದೇ ವಿಚಾರವಾಗಿ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ನಂತರ ನಾವು ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಿ ಈಗಾಗಲೇ 15 ಜನ ಆರೋಪಿಗಳನ್ನ ಬಂಧಿಸಿದ್ದೇವೆ ಎಂದರು.
ಕರ್ನಾಟಕ ರಾಜ್ಯ ಕೃಷಿ ಮಂಡಳಿಗೆ ವಂಚನೆ ಪ್ರಕರಣ: ಹಣ ರಿಕವರಿ ಆಗುತ್ತಿದೆ ಎಂದ ಸಿಸಿಬಿ ಜಂಟಿ ಆಯುಕ್ತ - ಕರ್ನಾಟಕ ರಾಜ್ಯ ಕೃಷಿ ಮಂಡಳಿಗೆ ವಂಚನೆ ಪ್ರಕರಣ
ಕರ್ನಾಟಕ ರಾಜ್ಯ ಕೃಷಿ ಮಂಡಳಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 15 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಸದ್ಯ ಪ್ರಕರಣದ ಹಣ ರಿಕವರಿ ಆಗಿದೆ. ಇನ್ನಷ್ಟು ಹಣ ರಿಕವರಿ ಮಾಡಬೇಕು ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ, ಹಲವಾರು ಎಪಿಎಂಸಿ ಸಿಬ್ಬಂದಿ ಭಾಗಿಯಾಗಿದ್ದು, ಇವರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಕೂಡ ಹಾಕಲಾಗಿದೆ. ಇಂದು ಬಂಧನವಾದ ವಿಜಯ್ ಆಕಾಶ್ ಈ ಹಿಂದೆಯೂ ಇದೇ ರೀತಿಯ ಕೃತ್ಯ ಎಸಗಿದ್ದ. ಈತನ ಮೇಲೆ ಹೈದರಾಬಾದ್, ತಿರುಪತಿಯಲ್ಲಿ ಕೇಸ್ ದಾಖಲಾಗಿತ್ತು ಎಂದರು.
ಸದ್ಯ ಪ್ರಕರಣದ ಹಣ ರಿಕವರಿ ಆಗಿದೆ. ಇನ್ನಷ್ಟು ಹಣ ರಿಕವರಿ ಮಾಡಬೇಕು. ಹೀಗಾಗಿ 10 ದಿನ ಪೊಲೀಸ್ ಕಸ್ಟಡಿಗೆ ಆರೋಪಿಯನ್ನ ತೆಗೆದುಕೊಂಡಿದ್ದೇವೆ. ಪ್ರಕರಣದಲ್ಲಿ ಈತನೇ ಪ್ರಮುಖ ಆರೋಪಿಯಾಗಿದ್ದಾನೆ. ಈತ ಎಪಿಎಂಸಿ ಸಿಬ್ಬಂದಿ ಜೊತೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾನೆ. ಈತನ ಬಳಿಯಿಂದ ಇನ್ನಷ್ಟು ಮಾಹಿತಿ ಪಡೆಯಬೇಕಾಗಿದೆ ಎಂದಿದ್ದಾರೆ.