ಕರ್ನಾಟಕ

karnataka

ETV Bharat / state

ಟರ್ಫ್ ಕ್ಲಬ್‌ನಲ್ಲಿ ಕುದುರೆ ಬಿದ್ದ ಪ್ರಕರಣ: ಕುದುರೆ ಮಾಲೀಕ ಸೇರಿ ಹಲವರಿಗೆ ಸಿಸಿಬಿ ನೋಟಿಸ್ - ವಿಲ್ ಟು ವಿನ್ ಕುದುರೆಯ ಮಾಲೀಕನಿಗೆ ಸಿಸಿಬಿ ನೋಟಿಸ್

ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಎಸಿಪಿ ನಾಗರಾಜು ಅವರ ನೇತೃತ್ವದ ತನಿಖಾ ತಂಡ ಟರ್ಫ್ ಕ್ಲಬ್ ದಾಂಧಲೆ ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಕುದುರೆ ಮಾಲೀಕ ಸೇರಿ ಹಲವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

CCB notice to horse owner, ವಿಲ್ ಟು ವಿನ್ ಕುದುರೆಯ ಮಾಲೀಕನಿಗೆ ಸಿಸಿಬಿ ನೋಟಿಸ್
ಟರ್ಫ್ ಕ್ಲಬ್ ಕುದುರೆ ಬಿದ್ದ ಪ್ರಕರಣ

By

Published : Dec 13, 2019, 1:03 PM IST

ಬೆಂಗಳೂರು: ಈ ವರ್ಷ ಮೊದಲ ಚಳಿಗಾಲದ ಕುದುರೆ ರೇಸ್ ಬೆಂಗಳೂರು ಟರ್ಫ್ ಕ್ಲಬ್​ನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ರೇಸ್ ಕೋರ್ಸ್​ನ ವಿಲ್ ಟು ವಿನ್ ಕುದುರೆ ಬಿದ್ದ ಕಾರಣ ದೊಡ್ಡ ದಾಂಧಲೆ ಸೃಷ್ಟಿಯಾಗಿತ್ತು. ಈ ಪ್ರಕರಣದ ಗಂಭೀರತೆ ಅರಿತ ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಇದೀಗ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಎಸಿಪಿ ನಾಗರಾಜು ಅವರ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿದ್ದು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಟರ್ಫ್ ಕ್ಲಬ್ ಕುದುರೆ ಬಿದ್ದ ಪ್ರಕರಣ

ಪ್ರಕರಣದ ಕುರಿತು ತನಿಖೆಗೆ ವಿಲ್ ಟು ವಿನ್ ಕುದುರೆಯ ಮಾಲೀಕ ಸಂಜಯ್.ಆರ್.ಠಕ್ಕರ್, ಕುದುರೆ ಟ್ರೈನರ್ ಪಾರ್ವತಿ.ಡಿ.ಭೈರಾಂಜಿ, ಕುದುರೆ ಜಾಕಿ ಸೂರಜ್ ಸೇರಿ ಹಲವರಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ತನಿಖೆ ವೇಳೆ ಕುದುರೆಯನ್ನು ಉದ್ದೇಶಪೂರ್ವಕವಾಗಿ ಬೀಳಿಸಲಾಗಿದೆ ಎಂದು ಕುದುರೆ ಮೇಲೆ ಬೆಟ್ಟಿಂಗ್ ಕಟ್ಟಿದ ಬಾಜಿಗಾರರು ಈ ವಿಚಾರವಾಗಿ ಅಧಿಕಾರಿ ಎದುರು ಆರೋಪ ಮಾಡಿದ್ದರು. ಈ ಕುರಿತು ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ABOUT THE AUTHOR

...view details