ಕರ್ನಾಟಕ

karnataka

ETV Bharat / state

ಮಂಗಳೂರು ಟು ಬೆಂಗಳೂರು ಡ್ರಗ್ ಜಾಲ: ನಗರದ ಪಾರ್ಟಿ ರಹಸ್ಯ ಬೆನ್ನತ್ತಿದ ಸಿಸಿಬಿ - ಮಂಗಳೂರು ಟು ಬೆಂಗಳೂರು ಡ್ರಗ್ ಜಾಲ

ಡ್ರಗ್ಸ್​ ಜಾಲದ ನಂಟು ಆರೋಪದಲ್ಲಿ ಬಂಧಿತನಾಗಿರುವ ಮಂಗಳೂರು ಮೂಲದ ತರುಣ್​, ತನಿಖಾಧಿಕಾರಿಗಳ ಮುಂದೆ ಮಾದಕ ಜಾಲದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾನೆ. ಇದರಲ್ಲಿ ನಟಿ, ನಿರೂಪಕಿ ಅನುಶ್ರೀ ಹೆಸರು ತಳುಕು ಹಾಕಿಕೊಂಡಿದೆ. ಹೀಗಾಗಿ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್​ ನೀಡಿದ್ದಾರೆ.

CCB notice to actress Anushree
ನಟಿ ಅನುಶ್ರೀಗೆ ಮಂಗಳೂರು ಸಿಸಿಬಿ ನೋಟಿಸ್​

By

Published : Sep 25, 2020, 10:49 AM IST

Updated : Sep 25, 2020, 5:55 PM IST

ಬೆಂಗಳೂರು:ಡ್ರಗ್ಸ್​​ ಜಾಲದ ನಂಟು ಆರೋಪಲ್ಲಿ ಮಂಗಳೂರಿನ ಡ್ಯಾನ್ಸರ್​ ಕಿಶೋರ್ ಅಮನ್ ಶೆಟ್ಟಿ ಬಂಧನವಾದ ಬಳಿಕ ಬೆಂಗಳೂರು-ಮಂಗಳೂರು ನಡುವಿನ ಮಾದಕ ಲೋಕದ ನಂಟಿನ ಕುರಿತು ಒಂದೊಂದೇ ಮಾಹಿತಿಗಳು ಹೊರಬರುತ್ತಿವೆ.

ಡ್ರಗ್ಸ್​ ಸೇವನೆ ಮತ್ತು ಮಾರಾಟ ಆರೋಪದ ಮೇಲೆ ಮಂಗಳೂರಿನ ಡ್ಯಾನ್ಸರ್-ಕೊರಿಯಾ‌ಗ್ರಾಫರ್ ಕಿಶೋರ್ ಅಮನ್ ಶೆಟ್ಟಿ ಬಂಧನವಾಗಿದ್ದು, ಈತನ ಬಂಧನದ ಬಳಿಕ ಬೆಂಗಳೂರು ಟು ಮಂಗಳೂರು ಡ್ರಗ್ ಜಾಲ ಇರುವುದು ಮತ್ತೆ ಸಾಬೀತಾಗಿದೆ. ಯಾಕಂದ್ರೆ ಬೆಂಗಳೂರು ಸಿಸಿಬಿ ಪೊಲೀಸರು ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣ ಸಂಬಂಧ ಬೆಂಗಳೂರು ಸಿಸಿಬಿ ಪೊಲೀಸರು ಮೊದಲು ಪ್ರತೀಕ್ ಶೆಟ್ಟಿ ಎಂಬಾತನನ್ನ ವಶಕ್ಕೆ ಪಡೆದಿದ್ರು. ಈತನ ವಿಚಾರಣೆ ವೇಳೆ‌ ಕಿಶೋರ್ ಶೆಟ್ಟಿಗೆ ಪರಿಚಯಸ್ಥನಾದ ತರುಣ್ ಎಂಬಾತನನ್ನ ಬಂಧಿಸಿದ್ದರು.

ಸದ್ಯ ತರುಣ್ ಡ್ರಗ್ಸ್​ ಮಾಫಿಯಾ ವಿಚಾರ ಕುರಿತು ಬಾಯ್ಬಿಟ್ಟ ಕಾರಣ ನಟಿ ಕಮ್​ ಆ್ಯಂಕರ್​ ಆಗಿರುವ ಅನುಶ್ರೀ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಸದ್ಯ ನಟಿ ಅನುಶ್ರೀ ಮಂಗಳೂರು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಬೇಕಿದೆ. ಬಳಿಕ ಬೆಂಗಳೂರು ಸಿಸಿಬಿ ಪೊಲೀಸರ ವಿಚಾರಣೆಯನ್ನ ಎದುರಿಸುವುದು ಅನಿವಾರ್ಯವಾಗುವ ಸಾಧ್ಯವಿದೆ. ಯಾಕಂದ್ರೆ ಬಂಧಿತ ಆರೋಪಿಗಳಾದ ಪ್ರತೀಕ್ ಶೆಟ್ಟಿ, ತರುಣ್, ಕಿಶೋರ್ ಶೆಟ್ಟಿ, ಅನುಶ್ರೀ ನಗರದ ಫ್ಲಾಟ್ ಒಂದರಲ್ಲಿ ಪಾರ್ಟಿ ನಡೆಸಿದ್ದು, ಈ ಪಾರ್ಟಿಯಲ್ಲಿ ಡ್ರಗ್ಸ್​ ಸೇವನೆಯಾಗಿರುವ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ ಎನ್ನಲಾಗ್ತಿದೆ.ಹೀಗಾಗಿ ಸದ್ಯ ಮಂಗಳೂರು ತನಿಖಾಧಿಕಾರಿಗಳು ತರುಣ್ ಹೇಳಿಕೆಯ ಮೇರೆಗೆ ಅನುಶ್ರೀಗೆ ಪ್ರಶ್ನೆಗಳನ್ನು ಕೇಳಲಿದ್ದಾರೆ. ಹಾಗೆ ಬೆಂಗಳೂರು ಸಿಸಿಬಿ ಪೊಲೀಸರ ವಶದಲ್ಲಿರುವ ಪ್ರತೀಕ್ ಶೆಟ್ಟಿ ಹೇಳಿಕೆಯೇ ಸದ್ಯ ತನಿಖಾಧಿಕಾರಿಗಳಿಗೆ ಡ್ರಗ್ಸ್​ ಮಾಫಿಯಾದ ಆಳಕ್ಕಿಳಿಯಲು ಸಹಾಯವಾಗಿದೆ.

ಪ್ರತೀಕ್ ಶೆಟ್ಟಿ ಹಿನ್ನೆಲೆ ನೋಡುವುದಾದರೆ ಈತ ಮೂಲತ: ಮಂಗಳೂರಿನವನಾಗಿದ್ದು, 2018ರಲ್ಲಿ ಬಾಣಸವಾಡಿ ಡ್ರಗ್ಸ್​ ಕೇಸ್ ನಲ್ಲಿ ಬಂಧಿತನಾಗಿ ನಂತರ ಹೊರಗಡೆ ಬಂದಿದ್ದ. ಇತ್ತೀಚೆಗೆ ಡ್ರಗ್ಸ್​ ಮಾಫಿಯಾ ಪ್ರಕರಣ ಹೊರ ಬರ್ತಿದ್ದ ಹಾಗೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿ ಪ್ರತೀಕ್ ಶೆಟ್ಟಿಯನ್ನ ವಿಚಾರಣೆಗೆ ಒಳಪಡಿದಾಗ ಈತ ಕಿಶೋರ್ ಶೆಟ್ಟಿ ಹಾಗೂ ತರುಣ್ ಶೆಟ್ಟಿ ವಿಚಾರವನ್ನು ಬಾಯ್ಬಿಟ್ಟಿದ್ದ ಎನ್ನಲಾಗ್ತಿದೆ. ಹೀಗಾಗಿ ಬೆಂಗಳೂರು ಸಿಸಿಬಿ ಪೊಲೀಸರ ಮಾಹಿತಿಯಾಧಾರದ ಮೇರೆಗೆ ಕಿಶೋರ್ ಶೆಟ್ಟಿ, ತರುಣ್ ಅವರನ್ನು ಖೆಡ್ಡಾಕ್ಕೆ ಬೀಳಿಸಿ ಅನುಶ್ರೀಗೆ ನೋಟಿಸ್ ನೀಡಲಾಗಿದೆ. ಅನುಶ್ರೀಯನ್ನು ಮುಂದಿನ ದಿನಗಳಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ರೂ‌ ಅಚ್ಚರಿಯಿಲ್ಲ. ಯಾಕಂದ್ರೆ ನಗರದ ಬಹುತೇಕ‌ ಪಬ್, ಫ್ಲಾಟ್ ಗಳಲ್ಲಿ ಡ್ರಗ್ಸ್​ ಪೂರೈಕೆ ಹಾಗೂ ಸೇವನೆಯಾಗಿದ್ದು, ಸದ್ಯ ಇದರ ವಿಚಾರವನ್ನ ಬೆಂಗಳೂರು ಪೊಲೀಸರು ಬೆನ್ನತ್ತಿದ್ದಾರೆ.

Last Updated : Sep 25, 2020, 5:55 PM IST

ABOUT THE AUTHOR

...view details