ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ದಿನೇ ದಿನೇ ಸಿನಿಮಾ ಸೆಲೆಬ್ರಿಟಿಗಳು ಹಾಗೂ ಕಿರುತೆರೆ ತಾರೆಯರಿಗೆ ಅಂಟಿಕೊಳ್ಳುತ್ತಿದೆ. ಇದೀಗ ನಿರೂಪಕಿ ಹಾಗೂ ನಟಿ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಸಿಸಿಬಿ ನೋಟಿಸ್: ಮನೆಯಲ್ಲೂ ಇಲ್ಲ, ಹೊರಗೂ ಇಲ್ಲ, ಕೈಗೆ ಸಿಗದ ಅನುಶ್ರೀ - CCB notice to Anushree
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಹಾಗೂ ನಟಿ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕಿಶೋರ್ ಶೆಟ್ಟಿ ಸ್ನೇಹಿತ ತರುಣ್ ಅನುಶ್ರೀಯೊಂದಿಗೆ ಪಾರ್ಟಿ ಮಾಡಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಅನುಶ್ರೀ ವಾಸವಾಗಿರುವ ಅಪಾರ್ಟ್ಮೆಂಟ್ನಲ್ಲಿ ಯಾರೂ ಇಲ್ಲ ಎಂಬ ಮಾಹಿತಿಯನ್ನು ಸೆಕ್ಯುರಿಟಿ ಗಾರ್ಡ್ ನೀಡಿದ್ದಾರೆ.
ಮಹಾಲಕ್ಷ್ಮೀ ಲೇಔಟ್ನಲ್ಲಿರುವ ವೈಭವ್ ಅಪಾರ್ಟ್ಮೆಂಟ್ನಲ್ಲಿ ಹಲವು ವರ್ಷಗಳಿಂದ ಅನುಶ್ರೀ ಮತ್ತು ತಾಯಿ ವಾಸವಾಗಿದ್ದಾರಂತೆ. ಬೆಳಗ್ಗೆ 12 ಗಂಟೆಗೆ ಸರಿಯಾಗಿ ಅನುಶ್ರೀ ಮನೆಯಿಂದ ಹೊರಗಡೆ ಹೋಗಿದ್ದಾರೆ ಎಂದು ಅಪಾರ್ಟ್ಮೆಂಟ್ ಸೆಕ್ಯುರಿಟಿ ಗಾರ್ಡ್ ಮಾಹಿತಿ ನೀಡಿದ್ದಾರೆ.