ಕರ್ನಾಟಕ

karnataka

ETV Bharat / state

ಸ್ಯಾಂಡಲ್​​ವುಡ್​ಗೆ ಡ್ರಗ್ಸ್​​ ಮಾಫಿಯಾ ನಂಟು ಆರೋಪ ಪ್ರಕರಣ: ಪ್ರತಿಷ್ಠಿತ ಹೋಟೆಲ್​ಗಳಿಗೆ ಸಿಸಿಬಿ ನೋಟಿಸ್ - ಕೇಂದ್ರ ಅಪರಾಧ ವಿಭಾಗ

ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ‌ ಪೊಲೀಸರು ಹೋಟೆಲ್​, ಪಬ್, ರೆಸಾರ್ಟ್​ಗಳಿಗೆ ನೋಟಿಸ್ ಜಾರಿ‌ ಮಾಡಿದ್ದಾರೆ.

ಪ್ರತಿಷ್ಟಿತ ಹೋಟೆಲ್​ಗಳಿಗೆ ಸಿಸಿಬಿ ನೋಟಿಸ್
ಪ್ರತಿಷ್ಟಿತ ಹೋಟೆಲ್​ಗಳಿಗೆ ಸಿಸಿಬಿ ನೋಟಿಸ್

By

Published : Sep 21, 2020, 1:03 PM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​​ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ‌ ಪೊಲೀಸರು, ಆರೋಪಿಗಳು ಪಾರ್ಟಿ ಮಾಡಿದ್ದ ಹೋಟೆಲ್​, ಪಬ್, ರೆಸಾರ್ಟ್​ಗಳಿಗೆ ನೋಟಿಸ್ ಜಾರಿ‌ ಮಾಡಿ ಶಾಕ್ ನೀಡಿದ್ದಾರೆ. ನಗರದಲ್ಲಿರುವ ಹಲವಾರು ಪ್ರತಿಷ್ಠಿತ ಸ್ಟಾರ್ ಹೋಟೆಲ್​ಗಳಲ್ಲಿ ನಟಿ ರಾಗಿಣಿ, ಸಂಜನಾ ಹಾಗೂ ಪಾರ್ಟಿ ಆಯೋಜಕ ವಿರೇನ್ ಖನ್ನಾ ಹಲವಾರು ಮಂದಿಯನ್ನ ಸೇರಿಸಿ ತಡರಾತ್ರಿಯವರೆಗೆ ಪಾರ್ಟಿ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ಆರೋಪಿಗಳು ಪಾರ್ಟಿ‌ ಮಾಡಿರುವ ಪ್ರತಿಯೊಂದು ಸಿಸಿಟಿವಿ ಫೂಟೇಜ್​ಗಳನ್ನ ನೀಡುವಂತೆ ಹೋಟೆಲ್​, ಪಬ್, ರೆಸಾರ್ಟ್ ಸಿಬ್ಬಂದಿಗೆ ತಿಳಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ದಿನದಿಂದ ಯಾವುದೇ ಹೋಟೆಲ್​ಗಳಾಗಲಿ​, ಪಬ್​ಗಳಾಗಲಿ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಸಿಸಿಬಿಗೆ ಕೊಟ್ಟಿಲ್ಲ. ಹೀಗಾಗಿ ಪೊಲೀಸರು ಆದಷ್ಟು ಬೇಗ ತಂದು ಕೊಡುವಂತೆ ಖಡಕ್ ಎಚ್ಚರಿಕೆ ನೀಡಿದ್ದು, ಇದರಿಂದ ಅನೇಕರ ಬಣ್ಣ ಬಯಲಾಗುವ ಸಾಧ್ಯತೆ ಇದೆ.

ಈಗಾಗಲೇ ತನಿಖೆ ವೇಳೆ ಆರೋಪಿಗಳು ಪ್ರತಿಷ್ಠಿತ ಸ್ಟಾರ್ ಹೋಟೆಲ್​ಗಳಲ್ಲಿ ಪಾರ್ಟಿ ಮಾಡಿ ಡ್ರಗ್ಸ್​ ಸೇವನೆ ಹಾಗೂ ಸೇಲ್ ಮಾಡಿರುವ ವಿಚಾರ ಬಾಯಿ ಬಿಟ್ಟಿದ್ದಾರೆ. ಹೀಗಾಗಿ‌ ಸಿಸಿಬಿ ಅಧಿಕಾರಿಗಳು ನೀಡಿರುವ ನೋಟಿಸ್​ಗೆ ಹೋಟೆಲ್​, ಪಬ್​ನವರು ಉತ್ತರ ನೀಡುವುದು ಅನಿವಾರ್ಯವಾಗಿದೆ.

ABOUT THE AUTHOR

...view details