ಕರ್ನಾಟಕ

karnataka

ETV Bharat / state

ಡ್ರಗ್ಸ್​ ಪ್ರಕರಣ: ತಲೆಮರೆಸಿಕೊಂಡಿರುವ ಆದಿತ್ಯ ಆಳ್ವಗೆ ಲುಕ್ ಔಟ್ ನೋಟಿಸ್​ ಜಾರಿ‌ ಮಾಡಿದ‌‌ ಸಿಸಿಬಿ - CCB latest news

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಆರೋಪ ಹಿನ್ನೆಲೆಯಲ್ಲಿ ತನ್ನ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿರುವ ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ಪತ್ತೆಗಾಗಿ ಸಿಸಿಬಿ ಲುಕ್ ಔಟ್ ನೋಟಿಸ್​ ಜಾರಿ ಮಾಡಿದೆ.

CCB issued lookout notice to Aditya Alva
ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ

By

Published : Sep 21, 2020, 10:24 PM IST

Updated : Sep 21, 2020, 10:56 PM IST

ಬೆಂಗಳೂರು:ಮಾದಕ ವಸ್ತು ಮಾರಾಟ ಜಾಲ ಮಾರಾಟ ಆರೋಪದಲ್ಲಿ ನಾಪತ್ತೆಯಾಗಿರುವ ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ಪತ್ತೆಗಾಗಿ ಸಿಸಿಬಿ ಲುಕ್ ಔಟ್ ನೋಟಿಸ್​ ಜಾರಿ ಮಾಡಿದೆ.

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಆರೋಪ ಹಿನ್ನೆಲೆಯಲ್ಲಿ ಕಾಟನ್ ಪೇಟೆಯಲ್ಲಿ‌ ದಾಖಲಾಗಿದ್ದ ಪ್ರಕರಣ ತನಿಖೆ ನಡೆಸುತ್ತಿರುವ ಸಿಸಿಬಿ‌ ಪೊಲೀಸರು ಈವರೆಗೂ 10 ಕ್ಕಿಂತ ಹೆಚ್ಚು ಮಂದಿ‌ ಆರೋಪಿಗಳನ್ನು ಬಂಧಿಸಿದ್ದಾರೆ.

ಇದೇ ಕೇಸ್​​ನಲ್ಲಿ ಮಾಜಿ ಸಚಿವರ ಪುತ್ರ ಆದಿತ್ಯ ಅಳ್ವ ಮೇಲೂ‌‌ ಎಫ್​ಐಆರ್ ದಾಖಲಾಗುತ್ತಿದ್ದಂತೆ ಕಳೆದ 15 ದಿನಗಳಿಂದ ಎಸ್ಕೇಪ್ ಆಗಿದ್ದಾನೆ. ಕೆಲ ದಿನಗಳ ಹಿಂದೆ ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೈಫ್ ನಿವಾಸದ ಮೇಲೆ‌ ಸರ್ಚ್ ವಾರೆಂಟ್ ಪಡೆದು ಮನೆ ಶೋಧ ನಡೆಸಿದ ಸಿಸಿಬಿ‌‌ ಪೊಲೀಸರಿಗೆ ಮನೆಯಲ್ಲಿದ್ದ ಮಾದಕ ವಸ್ತು, ಲಾಪ್​ಟ್ಯಾಪ್ ಸೀಜ್ ಮಾಡಿ ಡಿಜಿಟಲ್‌ ಎವಿಡೆನ್ಸ್ ಕಲೆ‌ ಹಾಕಿದ್ದರು.

ಮನೆಯಂಗಳದಲ್ಲಿ‌ ಆಯೋಜನೆ ಮಾಡುತ್ತಿದ್ದ ಪಾರ್ಟಿಯಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಎಂಬ ಆರೋಪ ಎದುರಿಸುತ್ತಿದ್ದು, ಈತನ ಪತ್ತೆಗೆ ಸಿಸಿಬಿ ತಂಡ ನಡೆಸುತ್ತಿದ್ದರೂ ಈವರೆಗೂ ಸುಳಿವು ಸಿಗದ ಪರಿಣಾಮ ಲುಕ್ ಆಫ್ ನೋಟಿಸ್​ ಜಾರಿ ಮಾಡಿದೆ.

ಜನತಾ ಪರಿವಾರ ಹಿರಿಯ ರಾಜಕಾರಣಿಯಾಗಿದ್ದ ಆದಿತ್ಯ ಆಳ್ವ ತಂದೆ ಜೀವರಾಜ್ ಆಳ್ವ 80ರ ದಶಕದಲ್ಲಿ ಪ್ರಭಾವಿ ನಾಯಕರಾಗಿದ್ದರು. ರಾಜ್ಯ ಜನತಾ ಸರ್ಕಾರದಲ್ಲಿ ಸಚಿವರಾಗಿದ್ದರು.

Last Updated : Sep 21, 2020, 10:56 PM IST

ABOUT THE AUTHOR

...view details