ಕರ್ನಾಟಕ

karnataka

ETV Bharat / state

ನಟಿ ರಾಗಿಣಿಯ ಬ್ಯಾಕ್‌ಬೋನ್ ರವಿಶಂಕರ್‌.. ಡ್ರಗ್ಸ್‌ನಲ್ಲಿ ಜಾರಿತಾ'ತುಪ್ಪ'!? - ಸಿಸಿಬಿ ಕಚೇರಿಯಲ್ಲಿ ನಟಿ ರಾಗಿಣಿ

ಅವನಿಗೆ 8 ವರ್ಷದ ಮಗು ಇದ್ದು, ನಾನ್ಹೇಗೆ ಆತನನ್ನ ಬಾಯ್ ಫ್ರೆಂಡ್ ಮಾಡಿಕೊಳ್ಳಲಿ. ರವಿಶಂಕರ್ ಡಿ ದರ್ಜೆ ನೌಕರ, ಅವನೊಬ್ಬ ಗುಡ್ ಫ್ರೆಂಡ್, ಮದುವೆ ಆಗಿರುವವನನ್ನು ನಾನ್ಯಾಕೆ ಬಾಯ್ ಫ್ರೆಂಡ್ ಮಾಡಿಕೊಳ್ಳಲಿ..

ragini
ರಾಗಿಣಿ ಸಿಸಿಬಿ ವಿಚಾರಣೆ

By

Published : Sep 4, 2020, 3:03 PM IST

Updated : Sep 4, 2020, 3:16 PM IST

ಬೆಂಗಳೂರು :ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ನಟಿ ರಾಗಿಣಿ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಆದರೆ, ಅದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳು ಸಿಕ್ಕಿರಲಿಲ್ಲ. ಆದರೆ, ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತುಪ್ಪದ ಬೆಡಗಿ ತಗಲ್ಹಾಕಿಕೊಳ್ತಾರಾ.. ಗೊತ್ತಿಲ್ಲ. ಆದರೆ, ಇದೇ ಕೇಸ್‌ಗೆ ಸಂಬಂಧಿಸಿದಂತೆ ನಟಿ ರಾಗಿಣಿ ವಿಚಾರಣೆಯನ್ನ ಸಿಸಿಬಿ ಅಧಿಕಾರಿಗಳು ನಡೆಸ್ತಿದ್ದಾರೆ.

ಡ್ರಗ್ಸ್‌ ದಂಧೆಗೆ ಸಂಬಂಧಿಸಿದಂತೆ ನಟಿಗೆ ನೋಟಿಸ್‌ ನೀಡಿದ್ದ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ನಟಿಯನ್ನ ಈಗ ತೀವ್ರಿ ವಿಚಾರಣೆಗೊಳಪಡಿಸಲಾಗ್ತಿದೆ. ಕೆಪಿಎಲ್‌ ಮ್ಯಾಚ್‌ ಫಿಕ್ಸಿಂಗ್‌ ಆರೋಪದ ಬಳಿಕ ರಾಗಿಣಿ ಜತೆಗೆ ಅವರ ಆಪ್ತ ರವಿಶಂಕರ್ ಎಂಬಾತನ ಮೇಲೆ ಸಿಸಿಬಿ ತೀವ್ರ ನಿಗಾ ಇರಿಸಿತ್ತು. ಈಗ ಡ್ರಗ್ಸ್‌ ದಂಧೆಯಲ್ಲೂ ಆತನ ಪಾತ್ರವಿದೆ ಎಂಬುದರ ಬಗ್ಗೆ ಆರೋಪವಿದ್ದ ಕಾರಣ, ರವಿಶಂಕರ್​​ನನ್ನು ಸಿಸಿಬಿ ಅಧಿಕಾರಿಗಳು ಎಳೆದು ತಂದಿದ್ದರು. ರವಿಶಂಕರ್ ಮತ್ತು ರಾಗಿಣಿ ನಡುವೆ ಇರುವ ಸಂಬಂಧದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಈ ಬಗ್ಗೆ ಸಿಸಿಬಿ ತನಿಖೆಗೊಳಪಡಿಸಿದೆ. ರವಿಶಂಕರ್ ಈತ ರಾಗಿಣಿ ಬಾಯ್ ಫ್ರೆಂಡ್ ಅನ್ನೋ ಮಾತಿತ್ತು.

ಆದರೆ, ವಿಚಾರಣೆ ವೇಳೆ ರಾಗಿಣಿ ಅದನ್ನ ಅಲ್ಲಗಳೆದಿದ್ದಾರಂತೆ. ರವಿಶಂಕರ್ ಈಗಾಗಲೇ ಮದುವೆಯಾಗಿದ್ದಾರೆ. ಅವನಿಗೆ 8 ವರ್ಷದ ಮಗು ಇದ್ದು, ನಾನ್ಹೇಗೆ ಆತನನ್ನ ಬಾಯ್ ಫ್ರೆಂಡ್ ಮಾಡಿಕೊಳ್ಳಲಿ. ರವಿಶಂಕರ್ ಡಿ ದರ್ಜೆ ನೌಕರ, ಅವನೊಬ್ಬ ಗುಡ್ ಫ್ರೆಂಡ್, ಮದುವೆ ಆಗಿರುವವನನ್ನು ನಾನ್ಯಾಕೆ ಬಾಯ್ ಫ್ರೆಂಡ್ ಮಾಡಿಕೊಳ್ಳಲಿ. ಅವರು ನನ್ನ ಜೊತೆ ಬ್ಯಾಕ್ ಬೋನ್ ಆಗಿ ಗುರುತಿಸಿಕೊಂಡಿದ್ದಾರೆಂದು ನಟ ರಾಗಿಣಿ ವಿಚಾರಣೆ ವೇಳೆ ತಿಳಿಸಿದ್ದಾರೆಂದು ಸಿಸಿಬಿ ಮೂಲಗಳು ಹೇಳ್ತಿವೆ.

ಆದಾಯದ ಮೂಲಕ್ಕೆ ಕೈ ಹಾಕಿದ ಅಧಿಕಾರಿಗಳು :ರವಿಶಂಕರ್ ಆರ್​ಟಿಒ ಕಚೇರಿಯಲ್ಲಿರುವ ನೌಕರ. ಈತನ ತಿಂಗಳ ಆದಾಯ ಬರೀ ₹30-40ಸಾವಿರ. ಆದರೆ, ಈತನ ಅಕೌಂಟ್​ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಣ ಸಿಕ್ಕಿದೆ. ಹಾಗಾಗಿ, ನೀವು ತಿಂಗಳಿಗೆ ಎಷ್ಟು ಖರ್ಚು ಮಾಡ್ತೀರಾ? ನೀವೊಬ್ಬ ನಟಿಯಾಗಿ, ನಿಮಗೆ ಹಣ ಬೇಕೇಬೇಕು. ಇದಕ್ಕೆಲ್ಲ ರವಿಶಂಕರ್ ಸಹಾಯ ಮಾಡ್ತಿದ್ದರಂತೆ, ಅಷ್ಟಕ್ಕೂ ಅವನ ಆದಾಯದ ಇತರೆ ಮೂಲವೇನು? ಎಂಬುದರ ಕುರಿತಂತೆ ನಟಿ ರಾಗಿಣಿಗೆ ಸಿಸಿಬಿ ಡ್ರಿಲ್‌ ಮಾಡಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ರಾಗಿಣಿಯ ವಿಚಾರಣೆ ಇನ್ನೂ ಮುಂದುವರೆದಿದ್ದು, ಕೆಪಿಎಲ್‌ ಮ್ಯಾಚ್‌ ಫಿಕ್ಸಿಂಗ್‌ ಆರೋಪದಿಂದ ಬಚಾವಾಗಿದ್ದ ರಾಗಿಣಿ, ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ಸಿಲುಕಿ ಕೊಳ್ತಾರಾ ಇಲ್ವಾ ಅನ್ನೋ ಬಗ್ಗೆ ಸಾಕಷ್ಟು ಚರ್ಚೆಗಳು ನಡೀತಿವೆ.

Last Updated : Sep 4, 2020, 3:16 PM IST

ABOUT THE AUTHOR

...view details