ಕರ್ನಾಟಕ

karnataka

ETV Bharat / state

ಸಿಸಿಬಿ ಬಂಧಿತ ಹ್ಯಾಕರ್ ಶ್ರೀ ಕೃಷ್ಣನ ಲೀಲಾ ಜಾಲ ಬಗೆದಷ್ಟು ಆಳ..! - China-made online game

ಶ್ರೀಕೃಷ್ಣ ಸೇರಿದಂತೆ ಬಂಧಿತ ಆರೋಪಿಗಳು ಮೊದಲಿಗೆ ಡ್ರಗ್ಸ್ ಅಕ್ರಮಗಳಲ್ಲಿ ಭಾಗಿಯಾಗಿ ನಂತರ ಡಾರ್ಕ್ ವೆಬ್ ಮೂಲಕ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು. ಚೀನಾ ಕಂಪನಿಯ ಪೋಕರ್ ಗೇಮ್ ಗಳನ್ನು ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ ಸಿಸಿಬಿ ಪೊಲೀಸರು 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ವಶಕ್ಕೆ‌ ಪಡೆದುಕೊಂಡಿದ್ದಾರೆ.

ccb-investigation-of-accused-hacker-shree-krishna
ಸಿಸಿಬಿ ಬಂಧಿತ ಹ್ಯಾಕರ್ ಶ್ರೀ ಕೃಷ್ಣನ ಲೀಲೆಯ ಜಾಲ ಬಗೆದಷ್ಟು ಆಳ..

By

Published : Jan 15, 2021, 1:57 PM IST

ಬೆಂಗಳೂರು: ಚೀನಾ‌ ನಿರ್ಮಿತ ಆನ್ ಲೈನ್ ಗೇಮ್ ಸೇರಿದಂತೆ ಅಂತಾರಾಷ್ಟ್ರೀಯ ಜಾಲತಾಣಗಳನ್ನು ಹ್ಯಾಕ್ ಮಾಡಿ ಕೊಟ್ಯಂತರ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪದಡಿ ಬಂಧಿತನಿಂದ ಸಿಸಿಬಿ ಪೊಲೀಸರು 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ವಶಕ್ಕೆ‌ ಪಡೆದುಕೊಂಡಿದ್ದಾರೆ.

ಡ್ರಗ್ಸ್ ಪ್ರಕರಣದಡಿ ಈಗಾಗಲೇ ಬಂಧನಕ್ಕೊಳಗಾಗಿರುವ ಜಯನಗರದ ನಿವಾಸಿಯಾದ ಶ್ರೀಕೃಷ್ಣ ಆಲಿಯಾಸ್ ಹ್ಯಾಕರ್​ ಕೃಷ್ಣನನ್ನು ವಿಚಾರಣೆ ಮಾಡಿದ ಸಿಸಿಬಿ ಪೊಲೀಸರು, ಅಂತಾರಾಷ್ಟ್ರೀಯ ಮಟ್ಟದ ವೆಬ್‌ಸೈಟ್‌ಗಳು ಸೇರಿದಂತೆ ಬೇರೆ ಬೇರೆ ದೇಶದ ವಿವಿಧ ಪೋಕರ್ ಗೇಮ್ ವೆಬ್ ಸೈಟ್ ಮತ್ತು ಕ್ರಿಸ್ಕೋ ಕರೆನ್ಸಿಗಳಾದ ಬಿಟ್ ಕಾಯಿನ್, ವೈಎಫ್‌ಐ, ಇಥೇರಿಯಂ ಖಾತೆಗಳನ್ನು ಆತ ಹ್ಯಾಕ್ ಮಾಡಿರುವುದನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಜಯನಗರದ ನಿವಾಸಿಯಾಗಿರುವ 25 ವರ್ಷದ ಶ್ರೀಕೃಷ್ಣ ಬೆಂಗಳೂರಿನಲ್ಲಿ ಪಿಯುಸಿ ಮುಗಿಸಿದ್ದ. ಈತ 2014 ರಿಂದ 2017 ರವರೆಗೆ ನೆದರ್​​​ಲ್ಯಾಂಡ್​​ನಲ್ಲಿ ಬಿಎಸ್​ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು ಸ್ವದೇಶಕ್ಕೆ ವಾಪಸಾಗಿದ್ದ. ತಾಂತ್ರಿಕವಾಗಿ ಪರಿಣಿತಿ ಹೊಂದಿದ್ದ ಈತ, ಡ್ರಗ್ಸ್ ಪ್ರಕರಣದಲ್ಲಿ ಕೆಂಪೇಗೌಡ ನಗರ ಪೊಲೀಸರಿಂದ ಬಂಧಿತರಾಗಿದ್ದ ಆರೋಪಿಗಳಾದ ಸುನೀಶ್ ಹೆಗ್ಡೆ, ಪ್ರಸಿದ್ದ್ ಶೆಟ್ಟಿ, ಹೇಮಂತ್ ಗ್ಯಾಂಗ್ ಸೇರಿಕೊಂಡು ದಂಧೆ ನಡೆಸುತ್ತಿದ್ದ. ಇದೇ ಆರೋಪಿಗಳು ಶ್ರೀಕೃಷ್ಣನ ಮೂಲಕ ಡಾರ್ಕ್ ವೆಬ್ ನಲ್ಲಿ ಹೈಡ್ರೋ ಗಾಂಜಾ ತರಿಸಿಕೊಂಡು ಬಿಟ್ ಕಾಯಿನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಬಳಿಕ ಸಂಜಯನಗರ, ಚಿಕ್ಕಮಗಳೂರು, ದೇವನಹಳ್ಳಿ ಸೇರಿದಂತೆ ಹಲವು ಪ್ಲ್ಯಾಟ್ ಗಳಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದರು‌‌. ಮೂರು ತಿಂಗಳ ಹಿಂದೆ ವಿದೇಶದಿಂದ ಚಾಮರಾಜಪೇಟೆ ಅಂಚೆ ಕಚೇರಿಗೆ ಬಂದಿದ್ದ ಡ್ರಗ್ ಇದ್ದ ಪಾರ್ಸೆಲ್ ಸ್ವೀಕರಿಸುವಾಗ ಹೇಮಂತ್ ಹಾಗೂ ಆತನ ಸಹಚರರು ಸಿಕ್ಕಿಬಿದ್ದಿದ್ದರು. ಇವರನ್ನು ತೀವ್ರ ವಿಚಾರಣೆ ನಡೆಸಿದಾಗ ಶ್ರೀಕೃಷ್ಣನ ಬಗ್ಗೆ ಬಾಯ್ಬಿಟ್ಟಿದ್ದರು.

ಗಣಕಯಂತ್ರ ವಿಜ್ಞಾನ ಪದವಿದರನಾಗಿದ್ದ ಆರೋಪಿ ಶ್ರೀ ಕೃಷ್ಣ ರನ್‌ಸ್ಕೇಪ್, ಭಾರತೀಯ ಪೋಕರ್ ವೆಬ್‌ಸೈಟ್‌ಗಳನ್ನೂ ಹ್ಯಾಕ್ ಮಾಡುತ್ತಿದ್ದ. ಈ ಹಿಂದೆ 2019 ಕರ್ನಾಟಕ ಸರ್ಕಾರದ ಇ-ಪ್ರೋಕ್ಯೂರ್ ಮೆಂಟ್ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿದ್ದ.‌ ಅಷ್ಟೇ ಅಲ್ಲದೇ ಗೇಮಿಂಗ್ ವೆಬ್ ಸೈಟ್ ಗಳನ್ನ ಹ್ಯಾಕ್ ಮಾಡಿಸಿ ದತ್ತಾಂಶ ಕದ್ದು ಮಾಲೀಕರಿಗೆ ಬೆದರಿಸಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀಕೃಷ್ಣ ಸೇರಿದಂತೆ ಬಂಧಿತ ಆರೋಪಿಗಳು ಮೊದಲಿಗೆ ಡ್ರಗ್ಸ್ ಅಕ್ರಮಗಳಲ್ಲಿ ಭಾಗಿಯಾಗಿ ನಂತರ ಡಾರ್ಕ್ ವೆಬ್ ಮೂಲಕ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು. ಚೀನಾ ಕಂಪನಿಯ ಪೋಕರ್ ಗೇಮ್ ಗಳನ್ನು ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details