ಕರ್ನಾಟಕ

karnataka

ETV Bharat / state

ಬೃಹತ್ ಮಟ್ಟದ ಡ್ರಗ್ಸ್​​​ ಪೆಡ್ಲರ್​​ ಬಂಧನಕ್ಕೆ ಬಲೆ ಬೀಸಿದ ಸಿಸಿಬಿ - ಡ್ರಗ್​​ ಪೆಡ್ಲರ್​​

ಎನ್​ಸಿಬಿ ಅಧಿಕಾರಿಗಳು ಬಾಲಿವುಡ್​​ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಷ್ಠಿತ ನಟಿಯ ವಿಚಾರಣೆಗೆ ಕರೆದಿರುವ ಬೆನ್ನೆಲ್ಲೇ, ಸಿಸಿಬಿ ಪೊಲೀಸರು ದೊಡ್ಡ ಮಟ್ಟದ ಪೆಡ್ಲರ್​​ ಅನ್ನು ಮಟ್ಟ ಹಾಕಲು ಮುಂದಾಗಿದ್ದಾರೆ.

CCB investigation going serious on sandalwood drug issue
ಬೃಹತ್ ಮಟ್ಟದ ಡ್ರಗ್​​ ಪೆಡ್ಲರ್​​ ಬಂಧನಕ್ಕೆ ಬಲೆ ಬೀಸಿದ ಸಿಸಿಬಿ

By

Published : Sep 24, 2020, 2:07 PM IST

ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಅರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ​ಸಿಸಿಬಿ ಪೊಲೀಸರು ದೊಡ್ಡ ಮಟ್ಟದ ಡ್ರಗ್ಸ್​​​ ಪೆಡ್ಲರ್​ ಅನ್ನು ಮಟ್ಟ ಹಾಕಲು ಮುಂದಾಗಿದ್ದಾರೆ. ಆದ್ರೆ ಆ ದೊಡ್ಡ ಡ್ರಗ್​​ ಪೆಡ್ಲರ್ ಯಾರು ಎಂಬುದರ ಸುಳಿವನ್ನು ತನಿಖಾಧಿಕಾರಿಗಳು ಬಿಟ್ಟುಕೊಟ್ಟಿಲ್ಲ.

ಈತ ಬೆಂಗಳೂರು ಟು‌ ಮುಂಬೈ, ಬೆಂಗಳೂರು ಟು ಗೊವಾ, ಬೆಂಗಳೂರು ಟು ಮಂಗಳೂರು ಹೀಗೆ ಹಲವೆಡೆ ಡ್ರಗ್ಸ್​ ಪೂರೈಸುವ ಕೆಲಸವನ್ನು ಮಾಡುತ್ತಿದ್ದ. ಹೀಗಾಗಿ ಸಿಸಿಬಿ ಅಧಿಕಾರಿಗಳು ಬಂಧಿತ ಪೆಡ್ಲರ್​​ಗಳು ಹಾಗೂ ನಟ ನಟಿಯರ ಮಾಹಿತಿ ಆಧಾರದ‌ ಮೇರೆಗೆ ಈತನನ್ನು ಬಂಧಿಸಲು ಮುಂದಾಗಿದ್ದಾರೆ. ಈತ ಭೂಗತ ಲೋಕದ ಕೆಲ ಆರೋಪಿಗಳ ಜೊತೆ ಸೇರಿದಂತೆ ರಾಜಾಕಾರಣಿಗಳ ಮಕ್ಕಳು, ಪ್ರತಿಷ್ಠಿತ ಸ್ಟಾರ್ಸ್​​, ನಟ- ನಟಿಯರ ಜೊತೆ ಲಿಂಕ್ ಹೊಂದಿದ್ದಾನೆ ಎಂಬ ಮಾಹಿತಿಯಿದೆ.

ಅಲ್ಲದೇ ಸುಶಾಂತ್ ಸಿಂಗ್ ಆತ್ಮೀಯರಿಗೆ ಡ್ರಗ್ಸ್​ ಪೂರೈಸಿರುವ ಆರೋಪ ಈತನ ಮೇಲಿದೆ. ಎನ್​ಸಿಬಿ ಅಧಿಕಾರಿಗಳು ಖೆಡ್ಡಾಕ್ಕೆ ಕೆಡವಿರುವ ಕೆಲ ಪೆಡ್ಲರ್​ಗಳ ಜೊತೆ ಈತ‌ ಲಿಂಕ್ ಹೊಂದಿರುವ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿದೆ. ಸದ್ಯ ಸಿಸಿಬಿಯ ಎಸಿಪಿ ರವಿಕುಮಾರ್, ಇನ್ಸ್​​ಪೆಕ್ಟರ್​​ಗಳ ತಂಡ ಈತನನ್ನು ಖೆಡ್ಡಾಕ್ಕೆ ಕೆಡವಲು ಮುಂದಾಗಿದ್ದಾರೆ.

ಈತನನ್ನು ಖೆಡ್ಡಾಕ್ಕೆ ಕೆಡವಿದ ನಂತರ ಈತನ ಜೊತೆ ಸಂಪರ್ಕ ಇರುವ ಸ್ಟಾರ್ ನಟನೋರ್ವನನ್ನು ಬಂಧಿಸಲು ಅಧಿಕಾರಿಗಳು ‌ಮುಂದಾಗಿದ್ದಾರೆ. ಸದ್ಯ ಈ ಪೆಡ್ಲರ್​ನನ್ನು ಬಂಧಿಸಿದ ಬಳಿಕ ಸಿಸಿಬಿ ಅಧಿಕಾರಿಗಳು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.

ABOUT THE AUTHOR

...view details