ಬೆಂಗಳೂರು:ಸತತ ಎರಡು ಗಂಟೆಗಳಿಂದ ವಿಚಾರಣೆ ನಡೆಸುತ್ತಿರುವ ಸಿಸಿಬಿ ತನಿಖಾಧಿಕಾರಿಗಳು ಪ್ರಶಾಂತ್ ಸಂಬರಗಿ ತಂದಿರುವ ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ಡ್ರಗ್ಸ್ ಪ್ರಕರಣ: ಪ್ರಶಾಂತ್ ಸಂಬರಗಿಗೆ ಪ್ರಶ್ನೆಗಳ ಸುರಿಮಳೆ! - prashant sambaragi latest news
ಮಾಧ್ಯಮದ ಮುಂದೆ ಯಾವ ಆಧಾರದ ಮೇಲೆ ಮಾತನಾಡಿದ್ದೀರಾ? ಮಾತನಾಡಿರೋ ಪ್ರತಿಯೊಂದಕ್ಕೂ ದಾಖಲೆಗಳು ಇದೆಯಾ? ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಇನ್ನೂ ಯಾರೆಲ್ಲಾ ಸೇವಿಸುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಸಿಸಿಬಿ ತನಿಖಾಧಿಕಾರಿಗಳು ಪ್ರಶಾಂತ್ ಸಂಬರಗಿಗೆ ಕೇಳಿದ್ದಾರೆ.
![ಡ್ರಗ್ಸ್ ಪ್ರಕರಣ: ಪ್ರಶಾಂತ್ ಸಂಬರಗಿಗೆ ಪ್ರಶ್ನೆಗಳ ಸುರಿಮಳೆ! CCB Investigation for Prashant sambaragi](https://etvbharatimages.akamaized.net/etvbharat/prod-images/768-512-8774235-thumbnail-3x2-bngg.jpg)
ಸಂಬರಗಿ ತಂದಿರುವ ಕೆಲವು ದಾಖಲೆಗಳನ್ನು ಇನ್ಸ್ಪೆಕ್ಟರ್ ಮೊಹಮ್ಮದ್ ಸಿರಾಜ್ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಎಸಿಪಿ ಗೌತಮ್, ಪ್ರಶಾಂತ್ ಸಂಬರಗಿಯಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಮಾಧ್ಯಮಗಳ ಮುಂದೆ ಯಾವ ಆಧಾರದ ಮೇಲೆ ಮಾತನಾಡಿದ್ದೀರಾ? ಮಾತನಾಡಿರೋ ಪ್ರತಿಯೊಂದಕ್ಕೂ ದಾಖಲೆಗಳು ಇದೆಯಾ? ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಇನ್ನೂ ಯಾರೆಲ್ಲಾ ಸೇವಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಸದ್ಯ ನಾಲ್ಕೈದು ನಟಿಯರ ಹೆಸರುಗಳನ್ನು ವಿಚಾರಣೆ ವೇಳೆ ಹೇಳಿದ್ದಾರೆ ಎನ್ನಲಾಗಿದೆ. ನಟ-ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಅಂತಾ ನಾನು ಸಾಕಷ್ಟು ಕಡೆ ಕೇಳಿದ್ದೀನಿ ಎಂದಿರುವ ಸಂಬರಗಿ, ಅದಕ್ಕೆ ಸಂಬಂಧಪಟ್ಟ ಕೆಲ ದಾಖಲೆ ಹಾಗೂ ಫೋಟೋಗಳನ್ನು ತನಿಖಾಧಿಕಾರಿಗಳ ಮುಂದೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.