ಕರ್ನಾಟಕ

karnataka

ETV Bharat / state

ಸ್ಯಾಂಡಲ್​​ವುಡ್​ ಡ್ರಗ್ಸ್​ ಪ್ರಕರಣ: ಆರೋಪಿಗಳಿಗೆ ಇಡಿ, ಐಟಿ ಸಂಕಷ್ಟ - ಸಿಸಿಬಿ ತನಿಖೆ ಲೆಟೆಸ್ಟ್ ನ್ಯೂಸ್

ಸಿಸಿಬಿ ಅಧಿಕಾರಿಗಳು ಸಂಗ್ರಹಿಸಿದ ಮಾಹಿತಿ ಆಧಾರದ ಮೇರೆಗೆ ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪ​​ ಪ್ರಕರಣ ಸಂಬಂಧ ಇಡಿ ಸದ್ಯ ಇಸಿಐಆರ್ ಪ್ರಕರಣ ದಾಖಲಿಸಿದ್ದು, ಸಂಬಂಧಪಟ್ಟ ದಾಖಲಾತಿಗೆ ಶೋಧ ಮುಂದುವರೆಸಿದೆ. ಹಾಗೆಯೇ ಅಕ್ರಮ ಹಣ ವಹಿವಾಟು, ಆಸ್ತಿ ತೆರಿಗೆ ಕಟ್ಟದೆ ಆದಾಯ‌ ಗಳಿಸಿರುವ ಕಾರಣ ಐಟಿ ಕೂಡ ತನಿಖೆ ಮುಂದುವರೆಸಿದೆ.

ccb-investigation-for-accused-of-drug-case
ಸ್ಯಾಂಡಲ್​​ವುಡ್​ ಡ್ರಗ್ಸ್​ ಪ್ರಕರಣ

By

Published : Sep 13, 2020, 7:53 AM IST

Updated : Sep 13, 2020, 8:31 AM IST

ಬೆಂಗಳೂರು:ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಿಗೆ ಸಿಸಿಬಿ ‌ಮಾತ್ರವಲ್ಲದೇ ಸದ್ಯ ಇಡಿ ‌ಹಾಗೂ ಐಟಿ ಕೂಡ ಉರುಳಾಗಿದೆ. ಇದರಿಂದ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಸಿಸಿಬಿ ಅಧಿಕಾರಿಗಳು ಸಂಗ್ರಹಿಸಿದ ಮಾಹಿತಿ ಆಧಾರದ ಮೇರೆಗೆ ಡ್ರಗ್ಸ್ ಆರೋಪ​​ ಪ್ರಕರಣಕ್ಕೆ ಎಂಟ್ರಿ ಕೊಟ್ಟ ಇಡಿ ಸದ್ಯ ಇಸಿಐಆರ್ ಪ್ರಕರಣವನ್ನು ದಾಖಲಿಸಿದ್ದು, ಸಂಬಂಧಪಟ್ಟ ದಾಖಲಾತಿಗೆ ಶೋಧ ಮುಂದುವರೆಸಿದೆ. ಹಾಗೆಯೇ ಅಕ್ರಮ ಹಣ ವಹಿವಾಟು, ಆಸ್ತಿ ತೆರಿಗೆ ಕಟ್ಟದೆ ಆದಾಯ‌ ಗಳಿಸಿರುವ ಕಾರಣ ಐಟಿ ಕೂಡಾ ತನಿಖೆ ಮುಂದುವರೆಸಿದೆ. ಒಂದು ವೇಳೆ ಸಿಸಿಬಿ ತನಿಖೆಯಿಂದ ಜಾಮೀನು ಪಡೆದು ಹೊರಗಡೆ ಬಂದರೂ ಕೂಡಾ ಬಂಧಿತ ಆರೋಪಿಗಳು ಇಡಿ ಹಾಗೂ ಐಟಿ ಅಧಿಕಾರಿಗಳ ತನಿಖೆ ಎದುರಿಸಬೇಕಾದದ್ದು ಅನಿವಾರ್ಯವಾಗಿದೆ‌.

ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಆರೋಪ ಪ್ರಕರಣದ ಕಿಂಗ್ ಪಿನ್ ರವಿಶಂಕರ್, ವಿರೇನ್ ಖನ್ನಾ, ಶಿವಪ್ರಕಾಶ್, ನಟಿಯರಾದ ರಾಗಿಣಿ ದ್ವೀವೆದಿ, ಸಂಜನಾ ಗರ್ಲಾನಿ, ಪ್ರತೀಕ್ ಶೆಟ್ಟಿ, ವೈಭವ್ ಜೈನ್, ಫಾಜಿಲ್, ಪ್ರಶಾಂತ್ ರಾಂಕಾ, ಲೂಮ್ ಪೆಪ್ಪರ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇನ್ನಿತರೆ ಆರೋಪಿಗಳ ಜಾಲವನ್ನು ಮತ್ತು ಅಕ್ರಮ ಆಸ್ತಿಯ ಮಾಹಿತಿಯನ್ನು ಸದ್ಯ ಕಲೆ ಹಾಕಲು ಇಡಿ (ಜಾರಿ ನಿರ್ದೇಶನಾಲಯ) ಮತ್ತು ಐಟಿ (ಆದಾಯ ತೆರಿಗೆ ಇಲಾಕೆ) ಮುಂದಾಗಿದೆ. ಒಂದು ವೇಳೆ ಅಕ್ರಮವಾಗಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಇದ್ರೆ ಆರೋಪಿಗಳು ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗುವ ಸಾಧ್ಯತೆಗಳಿವೆ.

ಆರೋಪಿಗಳ ಮಾಹಿತಿ:

ರಾಗಿಣಿ ದ್ವಿವೇದಿ:ಬಂಧಿತರಾದ ನಟಿ ರಾಗಿಣಿ ಬಳಿ ಇನ್ನೋವಾ, ಬಿಎಂಡಬ್ಲ್ಯೂ ಕಾರು, 2 ಐಷಾರಾಮಿ ಫ್ಲ್ಯಾಟ್, ಒಂದು ಮನೆ ಹೊಂದಿದ್ದು, ಮಿನರಲ್ ವಾಟರ್ ಕಂಪೆನಿ, ಕೆಪಿಎಲ್ ಬಳ್ಳಾರಿ ಟಸ್ಕರ್ಸ್ ತಂಡಕ್ಕೆ ಬಂಡವಾಳ ಸೇರಿದಂತೆ ಬೇರೆ ಉದ್ಯಮದಲ್ಲಿ ಹಣ ಹೂಡಿಕೆ ‌ಮಾಡಿರುವ ಮಾಹಿತಿ.

ರಾಗಿಣಿ ಆಪ್ತ ರವಿಶಂಕರ್: ಆರ್​ಟಿಓ ಕಚೇರಿಯಲ್ಲಿ ದ್ವಿತೀಯ ದರ್ಜೆಯ ನೌಕರನಾಗಿದ್ದರೂ ಕೂಡ ಲಕ್ಷಕ್ಕೂ ಹೆಚ್ಚು ಹಣ ಸಂಪಾದನೆ, ರಿಯಲ್ ಎಸ್ಟೇಟ್, ಅಪಾರ್ಟ್​​ಮೆಂಟ್​​​ನಲ್ಲಿ ವಾಸವಿರುವುದು. ಹಲವೆಡೆ ಡ್ರಗ್ಸ್​ ಪೂರೈಸಿ ಮಾಡಿ ‌ಹಣ ಸಂಪಾದನೆ ಮಾಡಿರುವ ಆರೋಪ.

ರಾಗಿಣಿ ಆಪ್ತ ವಿರೇನ್ ಖನ್ನಾ: ಖನ್ನಾ ಸಹ ಕೋಟಿ ಒಡೆಯ. ಹಲವೆಡೆ ಹೈ ಲೆವೆಲ್ ಪಾರ್ಟಿ, 13ಕ್ಕೂ ಹೆಚ್ಚು ಕಡೆ ಆಸ್ತಿ, ಅಕ್ರಮ ಹಣ ವರ್ಗಾವಣೆ, ಫ್ಲ್ಯಾಟ್, ಮನೆ, ಐಷಾರಾಮಿ ಕಾರು ಹೊಂದಿರುವ ಮಾಹಿತಿ.

ಶಿವಪ್ರಕಾಶ್:ಡ್ರಗ್ ಪೆಡ್ಲರ್​​ಗಳ ಮೂಲಕ ಉದ್ಯಮಿಗಳಿಗೆ ಮಾದಕ ವಸ್ತು ಪೂರೈಕೆ ಮಾಡಿ ಕೋಟ್ಯಾಂತರ ಮೌಲ್ಯದ ಆಸ್ತಿ, ಫ್ಲ್ಯಾಟ್ ಹಾಗೆ ರಾಗಿಣಿಗೆ ಆಪ್ತನಾಗಿದ್ದಾನೆ.

ಲೂಮ್ ಪೆಪ್ಪರ್:ಈತ ರಾಗಿಣಿಗೆ ಡ್ರಗ್ ಸಪ್ಲೈ ಮಾಡಿರುವ ಆರೋಪವಿದೆ. ಭಾರತದಲ್ಲಿ ಹಣ ಸಂಪಾದಿಸಿ ಸ್ವಂತ ಊರಾದ ಸೆನೆಗಲ್​​ನಲ್ಲಿ ಹಣ ಹೂಡಿಕೆ ಮಾಡಿ ಕೋಟಿ ಆಸ್ತಿ ಹೊಂದಿರುವ ಮಾಹಿತಿ.

ವೈಭವ್ ಜೈನ್: ತಂದೆ ಚಿನ್ನಾಭರಣದ ಮಳಿಗೆ ಇಟ್ಟುಕೊಂಡಿದ್ದಾರೆ. ಶೋಕಿ ಜೀವನಕ್ಕೆ ಡ್ರಗ್ಸ್​ ದಂಧೆ ಆರೋಪ, ಐಷಾರಾಮಿ ಬದುಕಿನ ಜೊತೆಗೆ ಈತ ರಾಗಿಣಿ ಆಪ್ತನಾಗಿದ್ದ.

ಸಂಜನಾ ಗರ್ಲಾನಿ: ಈಕೆ ಐಷಾರಾಮಿ ಜಾಗ್ವಾರ್, ಬಿಎಂಡಬ್ಯೂ ಹಾಗೂ ಹುಂಡೈ ವರ್ನಾ ಕಾರು ಹೊಂದಿದ್ದಾರೆ. ಚೆನ್ನೈ, ಬೆಂಗಳೂರು, ಇಂದಿರಾನಗರ, ಹೆಬ್ಬಾಳ ಮನೆ, ರಾಜಾನಕುಂಟೆ ಬಳಿ, ಹೈದರಾಬಾದ್​ನಲ್ಲಿ ಸೈಟ್ ಖರೀದಿ ಹಾಗೆ ಹಲವು ಕಡೆ ಹಣ ಹೂಡಿಕೆ ಮಾಡಿದ್ದಾರೆ. ಮದುವೆಯಾದ ಪಾಷಾ ಬಳಿ ಕೋಟಿ-ಕೋಟಿ ಆಸ್ತಿ, ರಿಯಾಲಿಟಿ ಶೋನ ಹಣ ಈಕೆಯಲ್ಲಿದೆ ಎನ್ನಲಾಗಿದೆ.

ರಾಹುಲ್: ಶ್ರೀಲಂಕಾದಲ್ಲಿರುವ ಬ್ಯಾಲಿಸ್ ಕ್ಯಾಸಿನೋ ಏಜೆಂಟ್, ರಿಯಲ್ ಎಸ್ಟೇಟ್, ಐಷಾರಾಮಿ ಕಾರು, ನಗರದಲ್ಲೊಂದು ಪಬ್, ಮನೆ ಹೊಂದಿರುವ ಮಾಹಿತಿ.

ಆದಿತ್ಯ ಆಲ್ವಾ: ರಾಜಾಕಾರಾಣಿಯೊಬ್ಬರ ಪುತ್ರನಾಗಿದ್ದು, ಸದಾಶಿವನಗರದಲ್ಲಿ ಮನೆ, ಫಾರ್ಮ್ ಹೌಸ್, ಫ್ಲಾಟ್, ಕಾರು ಹೊಂದಿರುವ ಮಾಹಿತಿ.

ಫಾಜಿಲ್: ಈತ ಸಂಜನಾ ಆಪ್ತನಾಗಿದ್ದು, ಕೋಟಿ ಆಸ್ತಿಯ ಒಡೆಯ. ಈತನ ಬಂಧನವಾದ್ರೆ ಹಲವಾರು ರಾಜಕಾರಣಿಗಳು ಸಿಸಿಬಿ ಖೆಡ್ಡಾಕ್ಕೆ ಬೀಳುವ ಸಾಧ್ಯತೆ. ಶ್ರೀಲಂಕಾದಲ್ಲಿ ಕ್ಯಾಸಿನೋ, ನಗರದಲ್ಲಿ ಐಷಾರಾಮಿ ಮನೆ, ಫ್ಲ್ಯಾಟ್, ಕಾರು ಹೊಂದಿರುವ ಮಾಹಿತಿ.

ಸದ್ಯ ಈ ಎಲ್ಲಾ ಆಸ್ತಿ ಮೇಲೆ ಇಡಿ‌ ಹಾಗೂ ಐಟಿ ಕಣ್ಣಿಟ್ಟಿದ್ದು, ಸಿಸಿಬಿ ಪೊಲೀಸರಿಂಧ ಮಾಹಿತಿ ಕಲೆ ಹಾಕಿ ದಾಳಿ ನಡೆಸಲು ಎಲ್ಲ ತಯಾರಿ ನಡೆಸಿದೆ ಎನ್ನಲಾಗಿದೆ.

Last Updated : Sep 13, 2020, 8:31 AM IST

ABOUT THE AUTHOR

...view details