ಕರ್ನಾಟಕ

karnataka

ETV Bharat / state

ರಾಹುಲ್, ನಿಯಾಜ್ ಅಹಮದ್ ಗೊತ್ತು, ಆದ್ರೆ ಅವರೊಂದಿಗೆ ನಾನು ಡ್ರಗ್ ಡೀಲ್ ಮಾಡಿಲ್ಲ: ನಟಿ ಸಂಜನಾ - actress Sanjana Galrani

ನಟಿ ಸಂಜನಾ ಬಂಧನಕ್ಕೆ ಸಿಸಿಬಿ ತಯಾರಿ ನಡೆಸುತ್ತಿದ್ದು, ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಸಂಜನಾರನ್ನು ಹಾಜರು ಪಡಿಸಿ ಕಸ್ಟಡಿಗೆ ಪಡೆಯಲು ಎಲ್ಲಾ ರೀತಿಯ ತಯಾರಿ‌ ನಡೆಸಿದ್ದಾರೆ. ತದ ನಂತರ ರಾಗಿಣಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿಯೇ ನಟಿ ಸಂಜನಾ ಗಲ್ರಾನಿಗೆ ಇರಲು ವ್ಯವಸ್ಥೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ccb-investigation-dril-to-actress-sanjana
ನಟಿ ಸಂಜನಾ

By

Published : Sep 8, 2020, 2:12 PM IST

ಬೆಂಗಳೂರು: ನಟಿ ಸಂಜನಾ ಮನೆ ಮೇಲೆ ತನಿಖಾಧಿಕಾರಿಗಳು ಏಕಾಏಕಿ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ. ನನಗೆ ರಾಹುಲ್, ನಿಯಾಜ್ ಅಹಮದ್ ಗೊತ್ತು, ಆದರೆ ಅವರ ಜೊತೆ ನಾನು ಡ್ರಗ್ ಡೀಲ್ ನಡೆಸಿಲ್ಲವೆಂದು ತಿಳಿಸಿದ್ದಾರೆ‌.

ಸದ್ಯ ನಟಿಯನ್ನ ಡಿಸಿಪಿ‌ ರವಿಕುಮಾರ್ ಹಾಗೂ ಮಹಿಳಾಧಿಕಾರಿ ಅಂಜುಮಾಲಾ‌ ನೇತೃತ್ವದಲ್ಲಿನ ತಂಡ ಸದ್ಯ ವಿಚಾರಣೆಗೆ ಒಳಪಡಿಸಿದ್ದಾರೆ. ಮತ್ತೊಂದೆಡೆ ನಟಿ ಸಂಜನಾ ಬಂಧನಕ್ಕೆ ತಯಾರಿ ನಡೆಸುತ್ತಿದ್ದು, ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಸಿಸಿಬಿ ಪೊಲೀಸರು ಸಂಜನಾರನ್ನು ಹಾಜರು ಪಡಿಸಿ ಕಸ್ಟಡಿಗೆ ಪಡೆಯಲು ಎಲ್ಲಾ ರೀತಿಯ ತಯಾರಿ‌ ನಡೆಸಿದ್ದಾರೆ.

ನಂತರ ರಾಗಿಣಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿಯೇ ನಟಿ ಸಂಜನಾ ಗಲ್ರಾನಿಗೆ ಇರಲು ವ್ಯವಸ್ಥೆ ಮಾಡಲಿದ್ದಾರೆ.

ABOUT THE AUTHOR

...view details