ಬೆಂಗಳೂರು:ರಾಗಿಣಿ ಆಪ್ತ ವಿರೇನ್ ಖನ್ನಾ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ. ವಿರೇನ್ ಖನ್ನಾ ಪಾರ್ಟಿ ಆಯೋಜಕನಾಗಿದ್ದು, ಈತ ಹೈಫೈ ಪಾರ್ಟಿಗಳನ್ನು ಆಯೋಜಿಸಿ ಬಹುತೇಕ ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಸುತ್ತಿದ್ದ ಎಂದು ತಿಳಿದು ಬಂದಿದೆ.
ಲಾಕ್ ಡೌನ್ ಸಮಯದಲ್ಲಿ ಜನ ಕೆಲಸ ಇಲ್ಲದೆ ಆರ್ಥಿಕ ಸಂಕಷ್ಟದಿಂದ ಪರದಾಡುತ್ತಿದ್ದರೆ, ಖನ್ನಾ ಖಾತೆಗೆ ಮಾತ್ರ ಕೋಟಿ ಕೋಟಿ ಹಣ ಜಮಾ ಆಗಿರುವುದು ಬೆಳಕಿಗೆ ಬಂದಿದೆ. ಅದೇ ಆಧಾರದಲ್ಲಿ ಖನ್ನಾ ಖಾತೆಗೆ ಹಣ ಹಾಕಿದವರ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿರುವ ಸಿಸಿಬಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಜೊತೆಗೆ ಇ.ಡಿ. ಕೂಡ ಈ ಬಗ್ಗೆ ತನಿಗೆ ನಡೆಸುತ್ತಿದೆ.
ಸಿಸಿಬಿಯ ಒಂದು ತಂಡ ವಿರೇನ್ ಖನ್ನಾ ಬ್ಯಾಂಕ್ ಖಾತೆಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದರೆ, ಇನ್ನೊಂದು ತಂಡ ಹಣ ಜಮಾ ಅಗಿರುವ ಬಗ್ಗೆ ಖನ್ನಾನಿಂದ ಹೇಳಿಕೆ ಪಡೆಯುತ್ತಿದೆ. ಈ ಹೇಳಿಕೆ ಮೇರೆಗೆ ಮತ್ತಷ್ಟು ಜನರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ದೆಹಲಿಯಲ್ಲಿ ಬಂಧಿತನಾಗಿರುವ ವಿರೇನ್ ಖನ್ನಾ ಮನೆ ಮೇಲೂ ಸಿಸಿಬಿ ದಾಳಿ ಮಾಡಿದೆ. ಪಾರ್ಟಿ ಆಯೋಜಕನಾಗಿರುವ ಖನ್ನಾ, ರಾಗಿಣಿ ಆಪ್ತನಾಗಿ ಗುರುತಿಸಿಕೊಂಡಿದ್ದ. ಶಾಂತಿನಗರ ಬಳಿ ಇರುವ ವಿರೇನ್ ಖನ್ನಾ ಮನೆ ಮೇಲೆ ಸಿಸಿಬಿ ದಾಳಿ ಮಾಡಿದಾಗ ಪ್ರತಿ ಕೋಣೆಯಲ್ಲೂ ಸಿಸಿಟಿವಿ ಇರುವುದು ಗೊತ್ತಾಗಿದೆ. ಆದರೆ, ಡಿವಿಆರ್ನಲ್ಲಿ ಕೆಲವೊಂದು ವಿಶುವಲ್ಗಳು ಮಾತ್ರ ಡಿಲಿಟ್ ಆಗಿದ್ದವು. ಈ ದೃಶ್ಯಗಳನ್ನು ಪುನಃ ತೆಗೆಯಲು ಪೊಲೀಸರು ಎಫ್ಎಸ್ಎಲ್ಗೆ ಡಿಸ್ಕ್ ರಿಟ್ರೀವ್ ಮಾಡಲು ರವಾನಿಸಿದ್ದಾರೆ. ರಿಟ್ರೀವ್ ಬಳಿಕ ಖನ್ನಾ ಮನೆಯ ಪಾರ್ಟಿಯಲ್ಲಿ ಯಾರೆಲ್ಲಾ ಭಾಗಿಯಾಗ್ತಿದ್ರು ಎಂಬ ವಿಚಾರ ಬೆಳಕಿಗೆ ಬರಲಿದೆ.
ವಿರೇನ್ ಖನ್ನಾ ಪಾರ್ಟಿ ಆಯೋಜಿಸುವಾಗ ಇಡೀ ಹೋಟೆಲ್ ಬುಕ್ ಮಾಡ್ತಿದ್ದ. ಅಲ್ಲಿ ಮಾದಕ ಲೋಕದ ಅನಾವರಣದ ಮಾಡ್ತಿದ್ದ. ಇದರಲ್ಲಿ ನಟಿಯರು, ರಾಜಾಕಾರಣಿ, ಉದ್ಯಮಿಗಳ ಮಕ್ಕಳು ಭಾಗಿಯಾಗ್ತಿದ್ರು ಎಂದು ಹೇಳಲಾಗ್ತಿದೆ. ಈತ ಪಾರ್ಟಿ ಆಯೋಜಿಸಿದೆಲೆಲ್ಲ, ಯಾರೆಲ್ಲಾ ಭಾಗಿಯಾಗ್ತಿದ್ರು, ಪಾರ್ಟಿ ನಡೆಸುವಾಗ ಪ್ರತಿಷ್ಠಿತ ಹೋಟೆಲ್ ಮಾಲೀಕರು ಮಾದಕ ದ್ರವ್ಯ ಪೂರೈಕೆಗೆ ಕೈ ಜೋಡಿಸಿದ್ರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.