ಬೆಂಗಳೂರು: ಡ್ರಗ್ಸ್ ನಂಟು ಆರೋಪ ಸಂಬಂಧ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರೂ ರಾಗಿಣಿ ವಿಚಾರಣೆಗೆ ಹಾಜರಾಗದೆ ನೆಪ ಹೇಳಿದ್ದರು. ಬಳಿಕ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ತಂಡ ಪರಿಶೀಲನೆ ನಡೆಸಿತ್ತು.
ಸಾಕ್ಷ್ಯ ನಾಶಕ್ಕೆ ಮುಂದಾಗಿದ್ರಾ ರಾಗಿಣಿ..?

ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ರಾಗಿಣಿ ಹೆಸರು ಕೇಳಿಬರುತ್ತಿದ್ದಂತೆ. ತನ್ನ ನಂಬರ್ ಬದಲಾಯಿಸಿರುವುದು ಪತ್ತೆಯಾಗಿದೆ. ಅಲ್ಲದೆ ಹೊಸ ನಂಬರ್ನಲ್ಲಿ ವಾಟ್ಸಾಪ್ ಆನ್ ಮಾಡಿದ್ದಾರೆ. ಹಳೆ ನಂಬರ್ನ ವಾಟ್ಸಾಪ್ ಚಾಟ್ಗಳು ಡಿಲೀಟ್ ಆಗಿವೆ. ಇದನ್ನರಿತ ಸಿಸಿಬಿ ಅಧಿಕಾರಿಗಳು, ನಟಿ ರಾಗಿಣಿ ವಿಚಾರಣೆಗೆ ಹಾಜರಾಗದೆ ಸಾಕ್ಷ್ಯ ನಾಶಕ್ಕೆ ಮುಂದಾಗುವ ಸಾಧ್ಯತೆ ಇದೆ ಎಂದು ಮನೆ ಮೇಲೆ ದಾಳಿಗೆ ಮುಂದಾಗಿದ್ದರು ಎನ್ನಲಾಗ್ತಿದೆ.
ಇದನ್ನೂ ಓದಿ: ಸಿಸಿಬಿ ಹಿರಿಯ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ನಟಿ ರಾಗಿಣಿ
ಇದೀಗ ಸಿಸಿಬಿ ಅಧಿಕಾರಿಗಳು ರಾಗಿಣಿಯ ವಿಚಾರಣೆ ನಡೆಸುತ್ತಿದ್ದು, ವಿಚಾರಣೆಯ ಬಳಿಕ ಸಿಸಿಬಿಯ ಮುಂದಿನ ನಿರ್ಧಾರದ ಮೇಲೆ ನಟಿ ಭವಿಷ್ಯ ನಿಂತಿದೆ.