ಕರ್ನಾಟಕ

karnataka

ETV Bharat / state

ಡ್ರಗ್ಸ್​ ಚಟ ಬಿಡಲು ಗೂಗಲ್​ ಮಾಡಿದ್ದ ವಿರೇನ್​ ಖನ್ನಾ... ಇಮೇಲ್​ ಪಾಸ್​ವರ್ಡ್​ ಕೊಡಲ್ಲ ಎಂದ ಆರೋಪಿ

ಡ್ರಗ್ಸ್​ ನಂಟಿನ ಕೇಸ್​​ನಲ್ಲಿ ಪ್ರಮುಖ ಆರೋಪಿಯಾಗಿರುವ ವಿರೇನ್​ ಖನ್ನಾ, ಸಿಸಿಬಿ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾನೆ. ಈ ವೇಳೆ ಹಲವು ಮಹತ್ತರ ವಿಚಾರಗಳನ್ನು ಬಾಯ್ಬಿಟ್ಟಿರುವ ಖನ್ನಾ, ಇದೀಗ ತನ್ನ ಇ-ಮೇಲ್ ಐಡಿ ಪಾಸ್​​ವರ್ಡ್​ ಒಪ್ಪಿಸಲು ನಿರಾಕರಿಸಿದ್ದಾನೆ ಎನ್ನಲಾಗಿದೆ.

viren khanna
ವಿರೇನ್ ಖನ್ನಾ

By

Published : Oct 3, 2020, 11:53 AM IST

ಬೆಂಗಳೂರು: ಸ್ಯಾಂಡಲ್​​​​ವುಡ್​​ ಡ್ರಗ್ಸ್ ಲಿಂಕ್​​​​ ಪ್ರಕರಣದಲ್ಲಿ ಬಂಧನವಾಗಿರುವ ಪ್ರಮುಖ ಆರೋಪಿ ವಿರೇನ್​ ಖನ್ನಾ ವಿಚಾರಣೆ ವೇಳೆ ಹಲವು ವಿಷಯಗಳು ಬೆಳಕಿಗೆ ಬರುತ್ತಿವೆ.

ಖನ್ನಾ ತನ್ನ ಮೊಬೈಲ್​​​​ನಲ್ಲಿ ಡ್ರಗ್ಸ್ ಕುರಿತಂತೆ ಮಾಹಿತಿ ಹುಡುಕಾಡಿರುವುದು ಪತ್ತೆಯಾಗಿದೆ. ಗೂಗಲ್​​ನಲ್ಲಿ ಗಾಂಜಾ, ಎಂಡಿಎಂಎ ಮಾತ್ರೆಗಳ ಕುರಿತು ಸರ್ಚ್​​ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಡ್ರಗ್ಸ್​​ನಿಂದ ಹೊರಬರುವುದು ಹೇಗೆ ಎಂಬ ವಿಷಯದ ಬಗ್ಗೆಯೂ ಸರ್ಚ್​ ಮಾಡಿದ್ದಾನೆ ಎನ್ನಲಾಗಿದೆ.

ಇದಲ್ಲದೆ ತನ್ನ ಪ್ರೇಯಸಿ ಜತೆ ಗಾಂಜಾ ಕುರಿತು ಚಾಟ್​​ ಮಾಡಿದ್ದ ಅಂಶ ಸಹ ತಿಳಿದು ಬಂದಿದೆ. ಖನ್ನಾ ಬಳಸುತ್ತಿದ್ದ 9 ಇ-ಮೇಲ್ ಐಡಿ ಮೇಲೆ ಕಣ್ಣಿಟ್ಟಿರುವ ಸಿಸಿಬಿ, ಇದರಲ್ಲಿ ನಾಲ್ಕು ‌ಇ-ಮೇಲ್ ಐಡಿಗಳ ಪಾಸ್​​​​​ವರ್ಡ್​ ಪಡೆದುಕೊಂಡಿದೆ. ಇನ್ನುಳಿದ ಐಡಿಗಳ ಪಾಸ್​​​​ವರ್ಡ್​ ನೀಡಲು ಖನ್ನಾ ನಿರಾಕರಿಸಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನುಳಿದ ಇ-ಮೇಲ್ ಐಡಿಗಳು ಓಪನ್ ಆದರೆ ಹಲವರ ಹೆಸರು ಬಹಿರಂಗವಾಗುವ ಸಾಧ್ಯತೆ ಇದೆ. ಅಲ್ಲದೆ ಹಲವು ಡ್ರಗ್ಸ್ ಪೆಡ್ಲರ್​ಗಳ ಮಾಹಿತಿ ಸಹ ಲಭ್ಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ABOUT THE AUTHOR

...view details