ಕರ್ನಾಟಕ

karnataka

ETV Bharat / state

ಸೈಲೆಂಟ್​ ಸುನೀಲನಿಗೆ ಗಾರ್ಬೇಜ್​ ಕಾಂಟ್ರ್ಯಾಕ್ಟ್ ಸಿಕ್ಕಿದ್ದು ಹೇಗೆ, ಸರ್ಕಾರಿ ಅಧಿಕಾರಿಗಳಿಗೂ ಹಾಕಿದ್ನಾ ಆವಾಜ್​? - Rowdy Sheater

ಹಿರಿಯ ಪೊಲೀಸ್​ ಸಿಬ್ಬಂದಿಯ ಮಾತಿಗೆ ಕ್ಯಾರೆ ಎನ್ನದ ರೌಡಿ ಶೀಟರ್ ಸೈಲೆಂಟ್ ಸುನೀಲನ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ಇವುಗಳನ್ನು ಕತ್ತರಿಸಿ ಹಾಕಲು ನಗರದ ಪೊಲೀಸರು ತಯಾರಿ ನಡೆಸಿದ್ದಾರೆ. ಅದು ಏನಿರಬಹುದು?

ರೌಡಿ ಶೀಟರ್ ಸೈಲೆಂಟ್ ಸುನೀಲನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಮುಂದಾದ ಸಿಸಿಬಿ

By

Published : May 1, 2019, 1:12 PM IST

ಬೆಂಗಳೂರು:ಪೊಲೀಸರ ಮುಂದೆಯೇ ಬಾಲ ಬಿಚ್ಚಿದ್ದ ರೌಡಿ ಶೀಟರ್ ಸೈಲೆಂಟ್ ಸುನೀಲನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಸಿಸಿಬಿ ತಯಾರಿ ನಡೆಸಿದೆ.

ಇತ್ತೀಚೆಗೆ ಚುನಾವಣೆ ಹಿನ್ನೆಲೆ ರೌಡಿ ಪರೇಡ್​​ ಮಾಡುತ್ತಿದ್ದಾಗ ಸಿಸಿಬಿ ಹೆಚ್ಚುವರಿ ಪೊಲೀಸ್​​​ ಆಯುಕ್ತ ಅಲೋಕ್​ ಕುಮಾರ್​ ಅವರನ್ನು ಗುರಾಯಿಸುವ ಮೂಲಕ ಕಣ್ಣು ಕೆಂಪು ಮಾಡಿದ್ದ. ಈ ಬಗ್ಗೆ ಅಲೋಕ್​ ಕುಮಾರ್​ ಕೂಡ ರೌಡಿಗೆ ಖಡಕ್​​ ವಾರ್ನಿಂಗ್​ ಮಾಡಿದ್ದರು. ​ಈ ವಿಡಿಯೋ ವೈರಲ್​ ಸಹ ಆಗಿತ್ತು.

ರೌಡಿ ಶೀಟರ್ ಸೈಲೆಂಟ್ ಸುನೀಲನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಮುಂದಾದ ಸಿಸಿಬಿ

ಅಂದೇ ಈತನ ಬಗ್ಗೆ ಮತ್ತಷ್ಟು ವಿಚಾರಣೆ ನಡೆಸಿದಾಗ ಸರ್ಕಾರಿ ಟೆಂಡರ್​ ನಡೆಸುವ ಸಂಗತಿಯನ್ನು ಬಾಯ್ಬಿಟ್ಟಿದ್ದ.

ಕ್ರಿಮಿನಲ್​ಗಳ ಕೈಯಲ್ಲಿ ಸರ್ಕಾರಿ ಅಧಿಕಾರಿಗಳು ನಡೆಸುವ ಗಾರ್ಬೇಜ್ ಟೆಂಡರ್​​ ಹೇಗೆ ಬಂತು ಅನ್ನೋ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಈ ಬಗ್ಗೆ ಸಿಸಿಬಿ ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ. ರೌಡಿ ಶೀಟರ್ ಸೈಲೆಂಟ್ ಸುನೀಲ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ವೈಟ್​ ಫೀಲ್ಡ್​ ಹಾಗೂ ಮಾರತ್​ ಹಳ್ಳಿ ಗಾರ್ಬೇಜ್ ಟೆಂಡರ್​ ಪಡೆದಿದ್ದನಂತೆ. ಹಾಗಾಗಿ ಅನುಮಾನ ಬಂದಿದ್ದರಿಂದ ಪೊಲೀಸರು ತನಿಖೆಗೆ ಮುಂದುವರೆಸಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಪರೇಡ್​ನಲ್ಲಿ ಸಿಸಿಬಿಯು ಸುನೀಲಗೆ ವರ್ಕ್ ಮಾಡಿದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಪ್ರಮುಖ ರಾಜಕಾರಣಿಯೊಬ್ಬರ ಆಪ್ತ ಕಾರ್ಯದರ್ಶಿಯಿಂದ ಕರೆ ಮಾಡಿಸಿ ತನ್ನನ್ನು ಬಿಡುವಂತೆ ಹೇಳಿಸಿದ್ದನಂತೆ.ಹಾಗಾಗಿ ಸಿಲಿಕಾನ್​ ಸಿಟಿಯಲ್ಲಿ ಈತನ ಚಟುವಟಿಕೆಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆ ಹಾಗೂ ಈತನೊಂದಿಗೆ ರಾಜಕಾರಣಿಗಳಿಗಿರುವ ನಂಟಸ್ಥಿಕೆಗೆ ಬ್ರೇಕ್​ ಹಾಕಲು ಪೊಲೀಸರು ಮುಂದಾಗಿದ್ದಾರೆ. ಹಾಗಾಗಿ ಹಳೆ ಪ್ರಕರಣಗಳಿಗೆ ಮರು ಜೀವ ಕೊಡುವ ನಿಟ್ಟಿನಲ್ಲಿ‌ ಅನಧಿಕೃತವಾಗಿರುವ ಕೆಲ ಪ್ರಕರಣಗಳ ಬಗ್ಗೆ ನೊಂದವರಿಂದ ದೂರು ನೀಡಿಸುವ ಪ್ರಯತ್ನ ನಡೆದಿದೆ.

ABOUT THE AUTHOR

...view details