ಬೆಂಗಳೂರು:ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ವಿಚಾರಣೆ ವೇಳೆ ಶೇ.10 ರಷ್ಟು ಕಮಿಷನ್ಗಾಗಿ ದುಷ್ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾರೆ.
ಈವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದ ಆರೋಪಿಗಳಾದ ರೋಹಿತ್ ಹಾಗೂ ನೇತ್ರಾವತಿ ಇಬ್ಬರು ಕೊರೊನಾ ರೋಗಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಸಂಪರ್ಕಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬೆಡ್ ಬೇಕು ಎಂದು ಮನವಿ ಮಾಡುವವರ ನಂಬರ್ಗಳಿಗೆ ಕರೆ ಮಾಡಿ, ಹಣ ನೀಡಿದರೆ ಐಸಿಯು ಬೆಡ್ ಕೊಡಿಸುವುದಾಗಿ ಹೇಳುತ್ತಿದ್ದರು. ಇದನ್ನು ನಂಬಿ ಜನ ಹಣ ಕೊಡುತ್ತಿದ್ದರು. ಹಣ ಪಡೆದ ಆರೋಪಿಗಳು ಶೇ.10 ರಷ್ಟು ಕಮಿಷನ್ ಇಟ್ಟುಕೊಂಡು ಉಳಿದದ್ದನ್ನು ಬಿಬಿಎಂಪಿಯ ಬೊಮ್ಮನಹಳ್ಳಿ ಕೋವಿಡ್ ವಾರ್ ರೂಮ್ ಮೇಲ್ವಿಚಾರಕರಾದ ಡಾ.ರೆಹಾನ್ ಹಾಗೂ ಡಾ.ಶಶಿಗೆ ನೀಡುತ್ತಿದ್ದರು. ರೋಗಿಗಳ ಸಂಬಂಧಿಕರು ಹಣ ನೀಡುವುದು ಖಾತ್ರಿಯಾಗುತ್ತಿದ್ದಂತೆ ಬೆಡ್ ಬ್ಲಾಕ್ ಮಾಡುತ್ತಿದ್ದರು ಎಂಬ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ.