ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಲಿಂಕ್ ಆರೋಪದಡಿ ವಿಚಾರಣೆ ಎದುರಿಸಿದ್ದ ಆರೋಪಿ ಕಾರ್ತಿಕ್ ಅಲಿಯಾಸ್ ರಾಜುನನ್ನು ಸಿಸಿಬಿ ಪೊಲೀಸರು ಮತ್ತೆ ವಶಕ್ಕೆ ಪಡದಿದ್ದಾರೆ. ಸದ್ಯ ಚಾಮರಾಜಪೇಟೆ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಈತ ಪ್ರತಿಷ್ಠಿತ ರೆಸಾರ್ಟ್ ಮಾಲೀಕನಾಗಿದ್ದು, ಈತನ ರೆಸಾರ್ಟ್ನಲ್ಲಿ ಪಾರ್ಟಿಗಳು ನಡೆಯುತ್ತಿದ್ದವು. ಬಂಧಿತ ಆರೋಪಿಗಳಾದ ನಟಿ ಸಂಜನಾ ಗಲ್ರಾನಿ ಹಾಗೂ ನಟಿ ರಾಗಿಣಿ ಆಪ್ತರು ಸೇರಿ ಕಾರ್ತಿಕ್ ರೆಸಾರ್ಟ್ನಲ್ಲಿ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.