ಕರ್ನಾಟಕ

karnataka

ETV Bharat / state

ಮತ್ತೋರ್ವ ಬಹುಭಾಷಾ ನಟಿಯ ಆಪ್ತ ಸಿಸಿಬಿ ವಶಕ್ಕೆ - ಬೆಂಗಳೂರು ಸುದ್ದಿ

ಸದ್ಯ ಸಿಸಿಬಿ ಪೊಲೀಸರು ನಟಿಮಣಿಯರ ಆಪ್ತರನ್ನೇ ಖೆಡ್ಡಾಕ್ಕೆ ಕೆಡವುತ್ತಿದ್ದು, ಸೆಲೆಬ್ರಿಟಿಗಳ ಪಾರ್ಟಿಗೆ ಡ್ರಗ್ ಪೂರೈಕೆಯನ್ನು ನಟಿಮಣಿಯರ ಆಪ್ತರು ಮಾಡುತ್ತಿದ್ದ ಗುಮಾನಿ ಮೇರೆಗೆ ತನಿಖೆ ಮಾಡುತ್ತಿದ್ದಾರೆ.

ಮತ್ತೋರ್ವ ಬಹುಭಾಷಾ ನಟಿಯ ಆಪ್ತ ಸಿಸಿಬಿ ವಶಕ್ಕೆ
ಮತ್ತೋರ್ವ ಬಹುಭಾಷಾ ನಟಿಯ ಆಪ್ತ ಸಿಸಿಬಿ ವಶಕ್ಕೆ

By

Published : Sep 3, 2020, 10:04 AM IST

ಬೆಂಗಳೂರು: ಸ್ಯಾಂಡಲ್​​ವುಡ್​​​ನಲ್ಲಿ ಡ್ರಗ್ಸ್​ ಬಳಕೆ ಆರೋಪ ಕೇಳಿ ಬಂದ ಬೆನ್ನಲ್ಲೇ ನಟಿ ರಾಗಿಣಿ ಆಪ್ತ ರವಿಶಂಕರ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದೀಗ ಮತ್ತೊಬ್ಬ ನಟಿಯ ಆಪ್ತನನ್ನು‌ ಸಿಸಿಬಿ ಪೊಲೀಸರು ಕೆಡ್ಡಾಕ್ಕೆ ಕೆಡವಿದ್ದಾರೆ. ಬಹುಭಾಷಾ ನಟಿಯ ಆಪ್ತ ರಾಹುಲ್ ಎಂಬಾತನನ್ನು ಕಾರಿನ ಸಮೇತ ರಾತ್ರಿ 3 ಗಂಟೆಗೆ ಸಿಸಿಬಿ ವಶಕ್ಕೆ ಪಡೆದು ತನಿಖೆ ಮುಂದುವರೆಸಿದೆ.

ಸದ್ಯ ಸಿಸಿಬಿ ಪೊಲೀಸರು ನಟಿಮಣಿಯರ ಆಪ್ತರನ್ನೇ ಖೆಡ್ಡಾಕ್ಕೆ ಕೆಡವುತ್ತಿದ್ದು, ಸೆಲೆಬ್ರಿಟಿಗಳ ಪಾರ್ಟಿಗೆ ಡ್ರಗ್ಸ್​ ಪೂರೈಕೆಯನ್ನು ನಟಿಮಣಿಯರ ಆಪ್ತರು ಮಾಡುತ್ತಿದ್ದ ಗುಮಾನಿ ಮೇರೆಗೆ ತನಿಖೆ ಮಾಡುತ್ತಿದ್ದಾರೆ. ಸದ್ಯ ರಾಗಿಣಿ ದ್ವಿವೇದಿ ಆಪ್ತ ಹಾಗೂ ಬಹುಭಾಷಾ ನಟಿಯ ಆಪ್ತರನ್ನ ಕರೆ ತಂದು ಸಿಸಿಬಿ ಕಚೇರಿಯಲ್ಲಿ ಫುಲ್ ಡ್ರಿಲ್​​​ ಮಾಡುತ್ತಿದ್ದಾರೆ.

ಸಿಸಿಬಿ ಪೊಲೀಸರು ನೇರವಾಗಿ ನಟಿ, ನಟರನ್ನ ಮೊದಲು ವಿಚಾರಣೆ ನಡೆಸದೆ ಅವರ ಆಪ್ತ ವಲಯಗಳನ್ನ ಮೊದಲು ಟಾರ್ಗೆಟ್ ಮಾಡಿಕೊಂಡು ಆಪ್ತರಿಂದ ಮಾಹಿತಿ ಪಡೆದು ತದ ನಂತರ ನಟಿಯರಿಗೆ ನೋಟಿಸ್ ಜಾರಿ ಮಾಡಲಿದ್ದಾರೆ. ಸದ್ಯ ಆಪ್ತರನ್ನೇ ಕರೆಸಿ ವಿಚಾರಣೆ ನಡೆಸುತ್ತಿರುವ ಕಾರಣ ಬಹುತೇಕ ನಟ, ನಟಿಯರಿಗೆ ನಡುಕ ಶುರುವಾಗಿದೆ.‌

ABOUT THE AUTHOR

...view details