ಕರ್ನಾಟಕ

karnataka

ETV Bharat / state

ದಿಗಂತ್​​​ ದಂಪತಿಯನ್ನು ವಶಕ್ಕೆ ಪಡೆದಿಲ್ಲ: ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ಸ್ಪಷ್ಟನೆ - accused was Sheikh Fazil

ಸಿಸಿಬಿ ವಿಚಾರಣೆಗೆ ಹಾಜರಾಗಿರುವ ನಟ ದಿಗಂತ್​​-ಐಂದ್ರಿತಾಗೆ ಹತ್ತು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಇನ್ಸ್​​ಪೆಕ್ಟರ್​​ ಪುನೀತ್​ ಹಾಗೂ ಅಂಜುಮಾಲ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ.

ccb-commissioner-on-diganth-and-aindrita-ray-inquiry
ದಿಗಂತ್​​​ ದಂಪತಿಯನ್ನು ವಶಕ್ಕೆ ಪಡೆದಿಲ್ಲ: ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ಸ್ಪಷ್ಟನೆ

By

Published : Sep 16, 2020, 12:44 PM IST

Updated : Sep 16, 2020, 1:37 PM IST

ಬೆಂಗಳೂರು: ಸ್ಯಾಂಡಲ್​​​​ವುಡ್ ಡ್ರಗ್ಸ್ ಲಿಂಕ್​​ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿರುವ ದಿಗಂತ್ ಹಾಗೂ ಐಂದ್ರಿತಾ ರೇಯನ್ನು ವಶಕ್ಕೆ ಪಡೆದುಕೊಂಡಿಲ್ಲ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ವಿಚಾರಣೆ ಆರಂಭಿಸಿದ್ದೇವೆ. ವಿಚಾರಣೆ ಬಳಿಕ ಎಲ್ಲವೂ ಬಹಿರಂಗಗೊಳ್ಳಲಿದೆ. ಸಿಸಿಬಿ ಇನ್ಸ್​​​ಪೆಕ್ಟರ್​ ಅಂಜುಮಾಲ ಅವರು ಐಂದ್ರಿತಾ ರೇ ವಿಚಾರಣೆ ನಡೆಸುತ್ತಿದ್ದರೆ, ಇನ್ಸ್​​​ಪೆಕ್ಟರ್​ ಪುನೀತ್, ದಿಗಂತ್ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ವಿಚಾರಣೆ ವೇಳೆ ನಟ ದಿಗಂತ್ ಹಾಗೂ ಐಂದ್ರಿತಾಗೆ ಹತ್ತು-ಹಲವು ಪ್ರಶ್ನೆಗಳನ್ನು ಮುಂದಿಟ್ಟಿರುವ ಸಾಧ್ಯತೆ ಇದೆ.

1. ಡ್ರಗ್ಸ್ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿ ಬರ್ತಿದೆ. ಕೆಲವು ಆರೋಪಿಗಳು ನಿಮ್ಮ ಹೆಸರನ್ನು ಹೇಳಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಾ..?
2. ಲೇಟ್ ನೈಟ್ ಪಾರ್ಟಿಗಳಲ್ಲಿ ಹೆಚ್ಚು ಭಾಗವಹಿಸುತ್ತೀರ ಅಂತಾರೆ..?
3. ಶ್ರೀಲಂಕಾ ಕ್ಯಾಸಿನೋಗೆ ಎಷ್ಟು ಸಲ ಹೋಗಿ ಬಂದಿದ್ದೀರಾ..?
4. ನಿಮಗೆ ಈಗ ಬಂಧಿಸಿರೋ ಆರೋಪಿಗಳ ಪೈಕಿ ಯಾರ ಪರಿಚಯವಿದೆ.?
5. ಲೇಟ್ ನೈಟ್ ಪಾರ್ಟಿಗಳಲ್ಲಿ ಡ್ರಗ್ಸ್ ಸಪ್ಲೈ ಆಗ್ತಾ ಇತ್ತಾ.?
6. ಡ್ರಗ್ಸ್ ಪೆಡ್ಲರ್​​​​​​ಗಳು ನಿಮಗೆ ಪರಿಚಯವಿದ್ದಾರಾ?

7. ಶೇಖ್ ಫಾಝಿಲ್​​ ಎಷ್ಟು ವರ್ಷದಿಂದ ಪರಿಚಯ..? ಈ ತರಹದ ಪ್ರಶ್ನೆಗಳನ್ನು ಕೇಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

Last Updated : Sep 16, 2020, 1:37 PM IST

ABOUT THE AUTHOR

...view details