ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿಯಿಟ್ಟ ಪ್ರಕರಣದ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಸದ್ಯ ಬಂಧನ ಭೀತಿಯಿಂದ ರಾಜ್ಯ ಬಿಟ್ಟು ಹೊರ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ. ಆದ್ರೆ ಸಂಪತ್ ರಾಜ್ ದಾಖಲಾಗಿದ್ದ ಖಾಸಗಿ ಆಸ್ಪತ್ರೆಯವರು ಮಾತ್ರ ಸರಿಯಾದ ಮಾಹಿತಿ ಕೊಡಲು ನಿರಾಕರಿಸಿದ್ದಾರೆ. ಹಾಗಾಗಿ ಸದ್ಯ ಪೊಲೀಸರು ತಂಡವಾಗಿ ಆರೋಪಿ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ ಎಂದು ಹೇಳಲಾಗ್ತಿದೆ.
ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯ ಹಿನ್ನೆಲೆ ಕಳೆದೆರಡು ತಿಂಗಳಿನಿಂದ ಸಂಪತ್ ರಾಜ್ಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಹಾಗೆ ಎರಡು ಬಾರಿ ಡಿಸ್ಚಾರ್ಜ್ ಕೂಡ ಮಾಡಿದ್ರು. ಡಿಸ್ಚಾರ್ಜ್ ಅದ ಬಳಿಕ ಮತ್ತೆ ಅದೇ ಆಸ್ಪತ್ರೆಯಲ್ಲಿ ಕೊರೊನಾ ಇರುವುದಾಗಿ ಹೇಳಿ ದಾಖಲಾಗಿದ್ದರು. ಸದ್ಯ ಆರೋಪಿ, ನಿಜವಾಗಿಯೂ ಕೊರೊನಾದಿಂದ ಬಳಲುತ್ತಿದ್ದರಾ, ಆಸ್ಪತ್ರೆಯಲ್ಲಿ ದಾಖಲಾದ ದಿನದಿಂದ ಈವರೆಗಿನ ಮಾಹಿತಿ, ಆರೋಗ್ಯ ಕುರಿತು ಮಾಹಿತಿ, ಹಾಗೆ ಸಿಸಿಟಿವಿ ವಿಶುವಲ್, ಡಿಸ್ಚಾರ್ಜ್ ಕುರಿತ ಪೂರ್ಣ ಮಾಹಿತಿ ನೀಡುವಂತೆ ಪೊಲೀಸರು ಸೂಚಿಸಿದ್ದರು ಎನ್ನಲಾಗ್ತಿದೆ.