ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು 45 ಕ್ಕೂ ಹೆಚ್ಚು ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಜೈಲಿನಲ್ಲಿ ಕುಳಿತು ಕ್ರೈಂ ಚಟುವಟಿಕೆ ನಡೆಸುತ್ತಿರುವ ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ನಾಗ, ನಟೋರಿಯಸ್ ರೌಡಿಗಳಾದ ಸೈಕಲ್ ರವಿ, ಸೈಲೆಂಟ್ ಸುನೀಲ ಜಿ.ಬಿ.ನಾರಾಯಣ್ ಸೇರಿದಂತೆ ರೌಡಿಗಳ ಸಹಚರರ ನಿವಾಸಗಳ ಮೇಲೆ ಸಿಸಿಬಿ ದಾಳಿ ನಡೆಸಿದೆ.
ರೌಡಿಶೀಟರ್ಗಳ ಮನೆಗಳ ಮೇಲೆ CCB ದಾಳಿ.. ಡ್ರ್ಯಾಗರ್ಗಳು ಪತ್ತೆ - bengaluru ccb
ದಿನೇ ದಿನೆ ಸಿಲಿಕಾನ್ ಸಿಟಿಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆ, ನಗರದಲ್ಲಿ ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು 45 ಕ್ಕೂ ಹೆಚ್ಚು ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ.
ಸಿಸಿಬಿ
ಜೈಲಿನಲ್ಲಿದ್ದರೂ ಪರೋಕ್ಷವಾಗಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ರೌಡಿ ನಾಗ ಮನೆಯಲ್ಲಿ ಡ್ರ್ಯಾಗರ್ ಹಾಗೂ 2 ಲಕ್ಷ ಹಣ ಪತ್ತೆಯಾಗಿದೆ. ಅಲ್ಲದೇ ಸಹಚರರ ಮನೆಯಲ್ಲಿ ಡ್ರ್ಯಾಗರ್ಗಳು ಪತ್ತೆಯಾಗಿದ್ದು, ಮಾರಕಾಸ್ತ್ರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದಿನೇ ದಿನೆ ಸಿಲಿಕಾನ್ ಸಿಟಿಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
Last Updated : Jul 23, 2021, 8:53 AM IST