ಬೆಂಗಳೂರು: ಅಮಾಯಕ ಹೆಣ್ಣು ಮಕ್ಕಳಿಗೆ ಕೆಲಸದ ಆಮಿಷ ತೋರಿಸಿ ಹೊರ ರಾಜ್ಯಗಳಿಂದ ಯುವತಿಯರನ್ನ ಕರೆ ತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಸುಬೇಂದ್ರ ಹಾಗೂ ಪ್ರಜ್ವಲ್ ಬಂಧಿತ ಆರೋಪಿಗಳು.
ಶ್ರೀರಾಂಪುರದಲ್ಲಿ ಮನೆ ಮಾಡಿಕೊಂಡ ಆರೋಪಿಗಳು ಅಮಾಯಕ ಯುವತಿಯರನ್ನ ಪುಸಲಾಯಿಸಿ ಹೆಚ್ಚು ಹಣ ಕೊಡುವುದಾಗಿ ಹೇಳಿ, ಮಾಂಸದ ದಂಧೆಯಲ್ಲಿ ತೊಡಗಿಕೊಂಡ್ರೆ ಕಡಿಮೆ ಅವಧಿಯಲ್ಲಿ ಕೈ ತುಂಬಾ ಹಣ ಮಾಡಬಹುದೆಂದು ಆಮಿಷ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದರು.
ಆರೋಪಿಗಳು ಫೋನ್ ಮೂಲಕ ಗಿರಾಕಿಗಳನ್ನ ಸಂಪರ್ಕ ಮಾಡುತ್ತಿದ್ದರು. ಗಿರಾಕಿಗಳಿಗೆ ಯುವತಿಯರ ಫೋಟೋ ಕಳಿಸುತ್ತಿದ್ದರು. ಗಿರಾಕಿಗಳು ಫಿಕ್ಸ್ ಆದ ಬಳಿಕ 2 ರಿಂದ 3 ಸಾವಿರ ರೂ. ಹಣ ಫಿಕ್ಸ್ ಮಾಡಿ ಯುವತಿರನ್ನ ಗಿರಾಕಿ ಬಳಿ ಕಳುಹಿಸಿಕೊಡುತ್ತಿದ್ದರು.