ಬೆಂಗಳೂರು:ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕೋರಮಂಗಲದ ಹುಕ್ಕಾ ಬಾರ್ ಹಾಗೂ ಕೆಆರ್‌ಪುರಂ ಬಳಿಯ ಜೂಜಾಟದ ಅಡ್ಡೆಗಳ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಕ್ಕಾ ಬಾರ್, ಅಕ್ರಮ ಜೂಜಾಟದ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ.. - ಕೋರಮಂಗಲ ಪೊಲೀಸ್ ಠಾಣಾ
ಅಕ್ರಮವಾಗಿ ನಡೆಸುತ್ತಿದ್ದ ಕ್ಲಬ್ ಹಾಗೂ ಹುಕ್ಕಾ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಜತೆಗೆ ನಗದು ಸೀಜ್ ಮಾಡಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಅಂಕಲ್ ಜಾನಿ ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾ ಬಳಸುತ್ತಿದ ಕಾರಣ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ, ಹುಕ್ಕಾ ಸೇದಲು ಬಳಸುತ್ತಿದ್ದ ವಸ್ತುಗಳು ಹಾಗೂ ಮಾಲೀಕ ಸುಮಂತ್ ಎಂಬಾತನನ್ನ ಬಂಧಿಸಿದ್ದಾರೆ.
ಕೆಆರ್‌ಪುರಂದ ಸುಭಾಷ್ ನಗರದ ಬಳಿ ಇರುವ ಪಲಪಲ ಕ್ಲಬ್ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ನಡೆಸುತ್ತಿದ್ದ ಜೂಜಾಟವನ್ನು ನಿಲ್ಲಿಸಿದ್ದಾರೆ. ಕ್ಲಬ್ನ ಮ್ಯಾನೇಜರ್ ಚಂದ್ರಬಾಬು ಹಾಗೂ ಮಾಲೀಕ ಮಂಜುನಾಥ್ ಎಂಬುವರು ಸೇರಿ ಒಟ್ಟು 15 ಮಂದಿಯನ್ನ ಬಂಧಿಸಿದ್ದಾರೆ. ನಗದು ಮತ್ತು ಇನ್ನಿತರೆ ವಸ್ತಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.